ಕಾಪು, ಆ.6: ಮಲ್ಲಾರು ಗ್ರಾಮದ ಕೊಂಬುಗುಡ್ಡೆ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಕೂಲಿ ಕಾರ್ಮಿಕ ಬಾಗಲಕೋಟೆ ಜಿಲ್ಲೆಯ ಹುನ ಗುಂದ ಮೂಲದ ಹನುಮಂತ ಶಾಂತಗೇರಿ ಎಂಬವರ ಪುತ್ರಿ ಗೀತಾ(18) ಎಂಬಾಕೆ ಆ.2ರಂದು ತನ್ನ ತಂಗಿಯನ್ನು ಶಾಲೆಗೆ ಬಿಟ್ಟು ಹೋದವಳು ನಾಪತ್ತೆ ಯಾಗಿದ್ದಾಳೆ. ಈ ಬಗ್ಗೆ ಕಾಫು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.