ಡಯಾನಾ ಪತ್ರಗಳು ಹರಾಜಿಗೆ

ಬಾಸ್ಟನ್,ಆ.6: ತನ್ನ ವಿಷಮ ದಾಂಪತ್ಯ, ತನ್ನನ್ನು ಕಾಡುವ ಅಭದ್ರತೆಯ ಭಾನನೆಗಳು ಹಾಗೂ ಪತಿ ಯುವರಾಜ ಚಾರ್ಲ್ಸ್ ಜೊತೆ ಈಗ ವಿವಾಹವಾಗಿರುವ ಕ್ಯಾಮಿಲಾ ಪಾರ್ಕರ್ ಬಗ್ಗೆ ಪರೋಕ್ಷವಾದ ಪ್ರಸ್ತಾಪಗಳನ್ನು ಒಳಗೊಂಡಿವೆಯೆನ್ನಲಾದ ಬ್ರಿಟನ್‌ನ ದಿವಂಗತ ಯುವರಾಣಿ ಡಯಾನ ಬರೆದಿರುವ 33 ಪತ್ರಗಳು ಲಂಡನ್‌ನಲ್ಲಿ ಹರಾಜಿಗಿಡಲಾಗಿದ್ದು, ಅವು 1.25 ಲಕ್ಷ ಡಾಲರ್ ಬೆಲೆಗೆ ಮಾರಾಟವಾಗುವ ನಿರೀಕ್ಷೆಯಿದೆ. ಯುವರಾಣಿ ಡಯಾನಾ ಸ್ವಹಸ್ತಾಕ್ಷರದಲ್ಲಿ ಈ ಪತ್ರಗಳನ್ನು ತನ್ನ ಆಪ್ತೆ ಕಾರೊಲಿನ್ ಪ್ರೈಡ್ ಬಾರ್ಥೊಲೋಮ್ಯು ಅವರಿಗೆ 1987 ಹಾಗೂ 1997ರ ಅವಧಿಯ ಮಧ್ಯೆ ಬರೆದಿದ್ದರು.
ಕರೊಲಿನ್ ಅವರು ಡಯಾನಾರ ಬಾಲ್ಯಗೆಳತಿಯಾಗಿದ್ದಾರೆ. ಡಯಾನಾ ತನ್ನ 12ನೇ ವಯಸ್ಸಿನಲ್ಲಿ ವೆಸ್ಟ್ ಹೆಲ್ತ್ ಸ್ಕೂಲ್‌ನಲ್ಲಿ ಕಲಿಯುತ್ತಿದ್ದಾಗಲೇ ಅವರಿಗೆ ಕರೊಲಿನ್‌ರ ಪರಿಚಯವಾಗಿತ್ತು.
Next Story





