ಡಿಸ್ಕಸ್ ಎಸೆತ: ಆ್ಯಂಡ್ರಿಯಸ್ ಗುಡ್ಝಿಯಸ್‌ಗೆ ಚಿನ್ನ

ಲಂಡನ್, ಆ.6: ಡಿಸ್ಕಸ್ ಎಸೆತದ ಸ್ಟಾರ್ ಆಟಗಾರರಿಗೆ ಶಾಕ್ ನೀಡಿದ ಲಿಥುವೇನಿಯಾದ ಆ್ಯಂಡ್ರಿಯಸ್ ಗುಡ್ಝಿಯಸ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.
2010ರಲ್ಲಿ ವಿಶ್ವ ಜೂನಿಯರ್ ಪ್ರಶಸ್ತಿಯನ್ನು ಜಯಿಸಿದ್ದ 26ರ ಹರೆಯದ ಆ್ಯಂಡ್ರಿಯಸ್ ಶನಿವಾರ ನಡೆದ ಡಿಸ್ಕಸ್ ಫೈನಲ್‌ನಲ್ಲಿ 69.21 ಮೀ. ದೂರಕ್ಕೆ ಡಿಸ್ಕಸ್‌ನ್ನು ಎಸೆದು ಮೊದಲ ಸ್ಥಾನ ಪಡೆದರು. ಪದಕ ಫೇವರಿಟ್ ಸ್ವೀಡನ್‌ನ ಡೇನಿಯಲ್ ಸ್ಟಾಲ್(69.19ಮೀ.) ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರೆ, ಅಮೆರಿಕದ ಮಾಸನ್ ಫಿನ್ಲಿ ವೈಯಕ್ತಿಕ ಶ್ರೇಷ್ಠ 68.03 ಮೀ. ದೂರ ಡಿಸ್ಕಸ್‌ನ್ನು ಎಸೆಯುವುದರೊಂದಿಗೆ ಕಂಚಿನ ಪದಕ ಜಯಿಸಿದ್ದಾರೆ. ‘‘ಪ್ರತಿಯೊಬ್ಬ ಅಥ್ಲೀಟ್ ವಿಶ್ವ ಪ್ರಶಸ್ತಿ ಗೆಲ್ಲಬೇಕೆಂಬ ಕನಸು ಕಾಣುತ್ತಾನೆ. ಇದೀಗ ನಾನು ಅಂತಹ ಕನಸು ಈಡೇರಿಸಿಕೊಂಡಿದ್ದೇನೆ. ನನಗೆ ಈಗಲೂ ನಂಬಲು ಸಾಧ್ಯವಾಗುತ್ತಿಲ್ಲ. ಇದು ಹೇಗೆ ಸಾಧ್ಯವಾಯಿತು ಎಂದು ತಿಳಿದುಕೊಳ್ಳಲು ಇನ್ನಷ್ಟು ಸಮಯಬೇಕು’’ ಎಂದು ಆ್ಯಂಡ್ರಿಯಸ್ ಹೇಳಿದ್ದಾರೆ.
Next Story





