ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರಿಂದ ಬೈಕ್ ರ್ಯಾಲಿ

ಚಾಮರಾಜನಗರ,ಆ.07: ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್‌ಗೌಡ ಅವರು ಒಂದು ತಿಂಗಳು ಧರಣಿ ನಡೆಸುತ್ತಿದ್ದು, ಅವರಿಗೆ ಬೆಂಬಲ ನೀಡಲು ಜಿಲ್ಲಾ ಘಟಕದ ವತಿಯಿಂದ ಚಾಮರಾಜನಗರದಿಂದ ಕೊಳ್ಳೇಗಾಲ ಮಾರ್ಗವಾಗಿ ಮದ್ದೂರಿಗೆ ಬೈಕ್ ರ್ಯಾಲಿ ಮೂಲಕ ತೆರಲಿದರು.
ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷ ಪಿ.ಲಿಂಗರಾಜು ಮಾತನಾಡಿದ ಅವರು, ರಾಜ್ಯದಾಂತ್ಯ ಬರವಿರುವುದರಿಂದ ಹಾಗೂ ರಾಜ್ಯದ ಜನರಿಗೆ ಕುಡಿಯುವ ನೀರಿಗೂ ಕಷ್ಟ ಪಡುತ್ತದ್ದಾರೆ. ಇದರ ನುಡುವೆ ರಾಜ್ಯ ಸರ್ಕಾರ ತಮಿಳುನಾಡಿಗೆ ಹೋಗುತ್ತಿರುವ ಕಾವೇರಿ ನೀರನ್ನು ಕೂಡಲೇ ನಿಲ್ಲಿಸಿ ನಮ್ಮ ರೈತರಿಗೆ ನಾಲೆಗಳಿಗೆ ನೀರನ್ನು ಹರಿಸಿಬೇಕೆಂದು ಒತ್ತಾಯಿಸಿ ಒಂದು ತಿಂಗಳಿಂದ ಧರಣಿ ನಡೆಸುತ್ತಿರುವ ರಾಜ್ಯಾಧ್ಯಕ್ಷ ರಮೇಶ್ ಗೌಡ ಬೆಂಬಲಿಸಲು ಇಂದು ನಗರದ ಚಾಮರಾಜೇಶ್ವರ ಮುಂಭಾಗದಿಂದ ಬೈಕ್ ರ್ಯಾಲಿ ಮಾಡುವುದರ ಮೂಲಕ ಬೆಂಬಲಿಸುತ್ತಿದ್ದೇವೆ ಎಂದು ಹೇಳಿದ್ದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಮಲ್ಲು, ಉಪಾಧ್ಯಕ್ಷ ಕೆ.ನೀಲಶೇಖರ್ ಕಾರ್ಯಧ್ಯಕ್ಷ ಕೆ.ಕೆ.ಹುಂಡಿ ನಾಗರಾಜು, ಪ್ರಧಾನ ಕಾರ್ಯದರ್ಶಿ ಸಿ.ಎಂ.ಮಹದೇವಸ್ವಾಮಿ, ಸಂಘಟನಾ ಕಾರ್ಯದರ್ಶಿ ಮಹದೇವಶೆಟ್ಟಿ, ನಾಗೇಶ್, ಎಸ್.ನಾರಾಯಣ್, ರಾಚಶೆಟ್ಟಿ, ಸಿದ್ದಮಲ್ಲುಶೆಟ್ಟಿ, ಎಸ್.ಕುಮಾರ್, ರವೀಂದ್ರ, ನಂಜುಂಡಸ್ವಾಮಿ, ರವಿ, ಮಹದೇವ್ ಮತ್ತು ಇತರರು ಭಾಗವಹಿಸಿದ್ದರು.





