ದಲಿತ ಕೇರಿಯಲ್ಲಿ ಬಿಜೆಪಿ ಪ್ರಕೋಷ್ಟದಿಂದ ರಕ್ಷಾ ಬಂಧನ

ಮಡಿಕೇರಿ, ಆ.7: ಭಾರತೀಯ ಜನತಾ ಪಾರ್ಟಿಯ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಟದ ಜಿಲ್ಲಾ ಘಟಕದ ವತಿಯಿಂದ ನಗರದ ಕರ್ಣಂಗೇರಿ ಗ್ರಾಮದ ದಲಿತರ ಕೇರಿಯಲ್ಲಿ ರಕ್ಷಾಬಂಧನ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಜಿಲ್ಲಾ ಬಿಜೆಪಿ ಮಹಿಳಾ ಮೋಚಾದರ್ ಅಧ್ಯಕ್ಷರಾದ ಯಮುನಾ ಚಂಗಪ್ಪ ಮಾತನಾಡಿ, ರಕ್ಷಾಬಂಧನ ಎನ್ನುವುದು ಸ್ನೇಹ, ಸಹೋದರತೆ, ಸಹಕಾರ ರಕ್ಷಣೆಯ ಸಂಕೇತವಾಗಿದೆ. ಎಂತಹ ವೈರಿಗಳನ್ನೂ ಮಿತ್ರರನ್ನಾಗಿಸುವ ಶಕ್ತಿ ಈ ರಕ್ಷಬಂಧನಕ್ಕಿದೆ ಎಂದು ಅಭಿಪ್ರಾಯಪಟ್ಟರು. ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಟದ ಜಿಲ್ಲಾ ಸಂಚಾಲಕರಾದ ಭಾರತಿ ರಮೇಶ್ ಮಾತನಾಡಿ, ರಕ್ಷಾ ಬಂಧನ ಕೇವಲಸಹೋದರಿಯನ್ನು ರಕ್ಷಿಸಲು ಮಾತ್ರ ಸೀಮಿತವಾಗದೆ ಮಾತೃಭೂಮಿ, ಪರಿಸರ, ಜಲವನ್ನು ಸಂರಕ್ಷಿಸುವ ಅಸ್ತ್ರವಾಗಬೇಕೆಂದರು.
ಬಿಜೆಪಿಯ ಎಸ್.ಸಿ ಘಟಕದ ಜಿಲ್ಲಾಧ್ಯಕ್ಷರಾದ ಎಸ್.ಸಿ.ಸತೀಶ್ ಮಾತನಾಡಿ, ರಕ್ಷಾ ಬಂಧನದ ಮಹತ್ವವನ್ನು ತಿಳಿಸಿದರು. ದಲಿತ ಬಂಧುಗಳ ಮನೆ ಮನೆಗಳಿಗೆ ತೆರಳಿದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ರಕ್ಷೆಯನ್ನು ಕಟ್ಟಿ, ಸಿಹಿಹಂಚಿ ರಕ್ಷಾ ಬಂಧನವನ್ನು ಅರ್ಥಪೂರ್ಣಗೊಳಿಸಿದರು.
ಪ್ರಕೋಷ್ಟದ ಮಡಿಕೇರಿ ಮಂಡಲದ ಸಂಚಾಲಕರಾದ ನರ್ಸರಿ ವಸಂತ್ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರೀಟಾ ಮುತ್ತಣ್ಣ, ಉಪಾಧ್ಯಕ್ಷರಾಧ ಜಾಜಿ ಸತೀಶ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಯಾಲದಾಳು ಪದ್ಮಾವತಿ, ಮಡಿಕೇರಿ ನಗರ ಮಹಿಳಾ ಮೋಚಾರ್ದಅಧ್ಯಕ್ಷರಾದ ಅನಿತಾ ಪೂವಯ್ಯ, ಜಯಮ್ಮ, ಪ್ರಕೋಷ್ಟದ ಸದಸ್ಯರಾದ ಡಿ.ಡಿ.ರಮೇಶ್, ಸವಿತಾ ಸಂತೋಷ, ವಿಜಯಲಕ್ಷ್ಮಿ,ಸ್ಥಳೀಯರಾದ ಸುರೇಶ್ ರಾಘವನ್, ಸತೀಶ್ ಗುಂಡಿಬೈಲ್, ವೆೀಲು ಸ್ವಾಮಿ, ವಿಠಲ ಪೂಜಾರಿ, ತಿಮ್ಮಯ್ಯಗಾಂಧಿ, ದಿನೇಶ್ ಬಿ.ಕೆ, ರವಿಕೋಟೆಕಾಡು, ಶಿವು ಬೋಪಣ್ಣ, ಮಂಜು,ಸಚಿನ್, ಅರವಿಂದಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪೊಲೀಸ್ ಠಾಣೆಗಳಿಗೆ ತೆರಳಿದ ಬಿಜೆಪಿ ಪ್ರಮುಖರು ಪೊಲೀಸ್ ಅಧಿಕಾರಿಗಳಿಗೆ ರಕ್ಷೆ ಕಟ್ಟಿ ಸಿಹಿ ಹಂಚಿದರು.







