ಇಂದಿರಾ ಗಾಂಧಿ ಜನ್ಮಶತಾಬ್ದಿ ಕಾರ್ಯಕ್ರಮ
ಉಡುಪಿ, ಆ.7: ಶೃಂಗೇರಿ ಬ್ಲಾಕ್ ಕಾಂಗ್ರೆಸ್ ಸಮಿತಿ ಮತ್ತು ಶೃಂಗೇರಿ ಟೌನ್ ಕಾಂಗ್ರೆಸ್ ಸಮಿತಿಯ ವತಿಯಿಂದ ಇಂದಿರಾ ಗಾಂಧಿಯವರ ಜನ್ಮ ಶತಾಬ್ದಿ ಕಾರ್ಯಕ್ರಮವನ್ನು ಆ.5ರಂದು ಆಚರಿಸಲಾಯಿತು.
ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ನಿಕಟಪೂರ್ವ ಯುವ ಕಾಂಗ್ರೆಸ್ ಉಪಾಧ್ಯಕ್ಷ ಅಮೃತ್ ಶೆಣೈ ವಿಶೇಷ ಉಪನ್ಯಾಸ ನೀಡಿ, ಇಂದಿರಾ ಗಾಂಧಿ ರೂಪಿಸಿದ ಜನಪರ ಕಾರ್ಯಕ್ರಮಗಳು, ದೇಶ ಕಟ್ಟುವಲ್ಲಿ ಅವರ ಪಾತ್ರ ಮತ್ತು ಅವರ ಚಿಂತನೆ ಈಗಿನ ಕಾಲಕ್ಕೆ ಅಳವಡಿಸಬೇಕಾದ ಮಹತ್ವದ ಕುರಿತು ವಿವರಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಡಾ.ವಿಜಯ ಕುಮಾರ್, ರಾಜೇ ಗೌಡರು, ಗಾಯತ್ರಿ ಶಾಂತೇಗೌಡ, ದಿನೇಶ್ ಶೆಟ್ಟಿ ಮೊದಲಾದವರು ಉಪಸ್ಥಿತ ರಿದ್ದರು.
Next Story





