14 ವರ್ಷಕ್ಕಿಂತ ಕೆಳಗಿನ ಮಕ್ಕಳು ದಹಿ ಹಂಡಿಯಲ್ಲಿ ಪಾಲ್ಗೊಳ್ಳಬಾರದು: ಹೈಕೋರ್ಟ್

ಮುಂಬೈ, ಅ. 8: ದಹಿ ಹಂಡಿ ಉತ್ಸವದಲ್ಲಿ 14 ವರ್ಷದ ಒಳಗಿನ ಮಕ್ಕಳಿಗೆ ಅವಕಾಶ ನೀಡಲಾಗುವುದಿಲ್ಲ ಎಂಬ ಮಹಾರಾಷ್ಟ್ರ ಸರಕಾರ ತಿಳಿಸಿದ್ದು, ಬಾಂಬೆ ಉಚ್ಚ ನ್ಯಾಯಾಲಯ ಇದಕ್ಕೆ ಒಪ್ಪಿಗೆ ಸೂಚಿಸಿದೆ. ಮಹಾರಾಷ್ಟ್ರ ಹಾಗೂ ಸಮೀಪದ ರಾಜ್ಯಗಳಲ್ಲಿ ಆಗಸ್ಟ್ 14ರಂದು ಕೃಷ್ಣ ಜನ್ಮಾಷ್ಠಮಿಯ ಹಿನ್ನೆಲೆಯಲ್ಲಿ ದಹಿ ಹಂಡಿ ಆಚರಿಸಲಾಗುತ್ತದೆ. ಆದರೆ, ಮಾನವ ಪಿರೆಮಿಡ್‌ನ ಎತ್ತರವನ್ನು ರಾಜ್ಯ ಸರಕಾರವೇ ನಿಯಂತ್ರಿಸಬೇಕು. ಒಂದು ವೇಳೆ ನ್ಯಾಯಾಲಯ ಮಧ್ಯಪ್ರವೇಶಿಸಿದರೆ, ಅದು ಶಾಸಕಾಂಗದ ಅಧಿಕಾರ ಕಿತ್ತುಕೊಂಡಂತೆ ಎಂದು ನ್ಯಾಯಾಲಯ ಹೇಳಿದೆ. ಮಾನವ ಪಿರೆಮಿಡ್‌ನಲ್ಲಿ ಪಾಲ್ಗೊಳ್ಳುವ ಸಂದರ್ಭ ಅಪಘಾತಗಳಾಗದಂತೆ ಆಯೋಜಕರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಉಚ್ಚ ನ್ಯಾಯಾಲಯ ಹೇಳಿದೆ.
Next Story





