ಅಣ್ವಸ್ತ್ರ ನಿಷೇಧ ಒಪ್ಪಂದಕ್ಕೆ ಬದ್ಧನಿಲ್ಲ: ಪಾಕ್

ಇಸ್ಲಾಮಾಬಾದ್, ಆ. 7: ವಿಶ್ವಸಂಸ್ಥೆ ಜಲೈ 7ರಂದು ಅಂಗೀಕರಿಸಿದ ಅಣ್ವಸ್ತ್ರ ನಿಷೇಧ ಒಪ್ಪಂದಕ್ಕೆ ಪಾಕಿಸ್ತಾನ ಬದ್ಧವಾಗುವುದಿಲ್ಲ ಎಂದು ಆ ದೇಶದ ವಿದೇಶ ಕಚೇರಿ ಸೋಮವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಒಪ್ಪಂದವು ಸಂಬಂಧಪಟ್ಟ ಎಲ್ಲರ ಹಿತಾಸಕ್ತಿಗಳನ್ನು ಗಣನೆಗೆ ತೆಗೆದುಕೊಳ್ಳಲು ವಿಫಲವಾಗಿದೆ ಎಂದು ಅದು ಅಭಿಪ್ರಾಯಪಟ್ಟಿದೆ.
ಪರಮಾಣು ಅಸ್ತ್ರಗಳನ್ನು ನಿಷೇಧಿಸುವ ಮೊದಲ ಜಾಗತಿಕ ಒಪ್ಪಂದದ ಪರವಾಗಿ ವಿಶ್ವಸಂಸ್ಥೆಯಲ್ಲಿ 120ಕ್ಕೂ ಅಧಿಕ ದೇಶಗಳು ಮತ ಚಲಾಯಿಸಿದ್ದವು.
Next Story





