ರೈಲಿನಲ್ಲಿ ಅಪರಿಚಿತರಿಂದ ಆಹಾರ ಸೇವಿಸದಂತೆ ಸೂಚನೆ
ಉಡುಪಿ, ಆ.7: ಕರಾವಳಿಯಲ್ಲಿ ಸಂಚರಿಸುವ ಮತ್ಸ್ಯಗಂದ ಸೇರಿದಂತೆ ಹಲವು ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಪ್ರಯಾಣದ ವೇಳೆ ಅಪ ರಿಚಿತರು ನೀಡುವ ಯಾವುದೇ ಆಹಾರ ಪದಾರ್ಥ ಅಥವಾ ಪಾನೀಯಗಳನ್ನು ಸೇವಿಸಬಾರದು ಎಂದು ರೈಲ್ವೆ ಪೊಲೀಸರು ಸೂಚನೆ ನೀಡಿದ್ದಾರೆ.
ಅಪರಿಚಿತರು ಪದಾರ್ಥಗಳಲ್ಲಿ ಮಾದಕ ವಸ್ತುಗಳನ್ನು ಬೆರೆಸಿ, ಎಚ್ಚರ ತಪ್ಪು ವಂತೆ ಮಾಡಿ ಬೆಲೆ ಬಾಳುವ ಆಭರಣ ಹಾಗೂ ಪರ್ಸ್‌ಗಳನ್ನು ದೋಚುವ ಪ್ರಕರಣಗಳು ಇದೀಗ ಹೆಚ್ಚುತ್ತಿದ್ದು, ಈ ಕುರಿತು ಪ್ರಯಾಣಿಕರು ಜಾಗೃತೆ ವಹಿಸಬೇಕು ಹಾಗೂ ಪ್ರಯಾಣ ಸಂದರ್ಭ ಬೆಲೆ ಬಾಳುವ ಆಭರಣಗಳನ್ನು ಪ್ರದರ್ಶಿಸಬಾರದು. ತುರ್ತು ಸಂದರ್ಭದಲ್ಲಿ ಅಗತ್ಯದ ನೆರವಿಗಾಗಿ ರೈಲ್ವೆಯ ಉಚಿತ ಸಹಾಯವಾಣಿ ಸಂಖ್ಯೆ 182ನ್ನು ಸಂಪರ್ಕಿಸುವಂತೆ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





