ಮಹಿಳೆಗೆ ಹಲ್ಲೆ, ಜೀವ ಬೆದರಿಕೆ
ಗಂಡನ ಮೊಬೈಲ್ ನಂಬರ ಕೊಡಲು ನಿರಾಕರಣೆ
ಮುಂಡಗೋಡ(ಹಳಿಯಾಳ), ಆ.7: ಗಂಡನ ಮೊಬೈಲ್ ನಂಬರ್ ಕೊಡದೇ ಇರುವುದರಿಂದ ಮಹಿಳೆಗೆ ಕೈಹಿಡಿದು ಎಳೆದಾಡಿ ಕಪಾಳಕ್ಕೆ ಹೊಡೆದು ಜೀವಬೆದರಿಕೆ ಹಾಕಿದ ಘಟನೆ ಹಳಿಯಾಳ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಹಿಳೆಗೆ ಬೆದರಿಕೆ ಹಾಕಿದ ಆರೋಪಿನ್ನು ಭಜಂತ್ರಿ ಓಣಿಯ ರಾಘು ವಡ್ಡರ ಎಂದು ಹೇಳಲಾಗಿದೆ.
ಆರೋಪಿ ರಾಘು ವಡ್ಡರ ಫಿರ್ಯಾದಿ ಮನೆಯ ಹತ್ತಿರ ಬಂದು ನಿನ್ನ ಗಂಡನ ಮೊಬೈಲ್ ನಂಬರ್ ನೀಡುವಂತೆ ಕೇಳಿದಾಗ ಕೊಡಲು ನೀರಾಕರಿಸಿದ ಮಹಿಳೆಯ ಕೈ ಹಿಡಿದು, ಎಳೆದು, ಕಪಾಳಕ್ಕೆ ಹೋಡೆದು, ನಿನ್ನ ಮಗಳನ್ನು ಬಲತ್ಕಾರ ಮಾಡುತ್ತೇನೆ ಮತ್ತು ನಿಮ್ಮ ಕುಟುಂಬದವರನ್ನು ಜೀವ ಸಹಿತ ಬೀಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾನೆ ಎಂದು ಫಿರ್ಯಾದಿ ಮೋತಿ ಡಿಸೋಜಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ
Next Story





