ಭಟ್ಕಳ: ಬಟ್ಟೆ ಬರೆ ಸಮೇತ ಬೆಲೆಬಾಳುವ ವಸ್ತುಗಳು ಕಳವು
.jpg)
ಭಟ್ಕಳ, ಆ.7: ಭಟ್ಕಳನಗರದಲ್ಲಿ ಮನೆಗಳ್ಳರು ಮತ್ತೆ ಶುರುವಾಗಿದ್ದು, ಇಲ್ಲಿನ ಜಾಮಿಯಾಬಾದ್ ರಸ್ತೆಯಲ್ಲಿರುವ ಅಬೂಬಕರ್ ಮಸೀದಿ ಬಳಿಯ ಮನೆಯೊಂದರಿಂದ ಬಟ್ಟೆಬರೆ, ಟಿ.ವಿ. ಜ್ಯೂಸರ್, ಓವನ್ ಸಮೇತ ಸುಮಾರು 1.75 ಲಕ್ಷ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.
ಮನೆ ಒಡತಿ ಫೈರೋಝಾ ರಫೀಖ್ ತಿಳಿಸುವಂತೆ, ಶನಿವಾರ ಸಂಜೆ ಮನೆಗೆ ಬೀಗ ಹಾಕಿ ಬಂದರ್‍ರೋಡ್ ನಲ್ಲಿರುವ ತನ್ನ ತಾಯಿ ಮನೆಗೆ ಹೋಗಿದ್ದು, ಸೋಮವಾರ 11.00ಗಂಟೆಗೆ ಮರಳಿ ಮನೆಗೆ ಬಂದು ನೋಡಿದಾಗ ಮನೆಯನ್ನು ಕಳ್ಳರು ದೋಚಿಕೊಂಡಿರುವ ವಿಷಯ ಬೆಳಕಿಗೆ ಬಂದಿದೆ. ಕೀಲಿ ಹಾಕಿಕೊಂಡಿರುವ ಎರಡು ಬೆಡ್‍ರೂಂ ಗಳು ತೆರೆದುಕೊಂಡಿದ್ದು, ಕಪಾಟುಗಳಿಂದ ಬಟ್ಟೆಬರೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಮನೆಯಲ್ಲಿ ಬಳಕೆಯಾಗುವ ಟಿ.ವಿ. ಓವನ್, ಜ್ಯೂಸರ್ ಸಮೇತ ವಿವಿಧ ಬೆಲೆಬಾಳುವ ವಸ್ತುಗಳು ಕಾಣೆಯಾಗಿವೆ ಎಂದು ತಿಳಿಸಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಗ್ರಾಮೀಣಠಾಣೆಯ ಪೊಲೀಸರು ಪರಿಶೀಲನೆಯನ್ನು ನಡೆಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
Next Story





