ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿ ಸಾವು
ಕುಶಾಲನಗರ, ಆ.7: ಗುಡ್ಡೆಹೊಸುರು ನಿವಾಸಿ ಮಥಾಯಿ (ಜೋಷಿ)ಎಂಬವರು ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ.
ಮುಂಜಾನೆ 6 ಗಂಟೆ ಸಮಯದಲ್ಲಿ ಮಥಾಯಿಯವರು ತಮ್ಮ ಮನೆಯ ಆರ್.ಸಿ.ಸಿ.ಯ ಮೇಲೆ ಹತ್ತಿ ಪಕ್ಕದಲ್ಲಿದ ಅವರ ತೆಂಗಿನ ಮರದಿಂದ ತೆಂಗಿನಕಾಯಿ ಕೀಳಲು ಸಲಾಕೆಗೆ ಕಬ್ಬಿಣದ ಕೊಕ್ಕೆಯನ್ನು ಕಟ್ಟಿ ಅದರ ಮೂಲಕ ಕಾಯಿ ಕೀಳುತ್ತಿದ್ದರು.
ಈ ಸಂಧರ್ಭ ಮರದ ಕೆಳಭಾಗದಲ್ಲಿ 11ಕೆ.ವಿ. ವಿದ್ಯುತ್ ಲೈನ್ ಹಾದು ಹೋಗಿದ ತಂತಿಮೇಲೆ ನೇರವಾಗಿ ಬಿದ್ದು ಮಥಾಯಿಯವರ ದೇಹದ ಅರ್ಧಭಾಗ ಸುಟ್ಟುಹೋಗಿದೆ.
ತಕ್ಷಣ ಚೇಸ್ಕಂ ಅಧಿಕಾರಿ ವಿನಯ್ ಕುಮಾರ್ ಸ್ಥಳಕ್ಕೆ ಆಗಮೀಸಿ, ಪರಿಶೀಲನೆ ನೆಡೆಸಿದರು.
ಕುಶಾಲನಗರ ಗ್ರಾಮಾಂತರ ಪೋಲಿಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.
Next Story





