ಪಶ್ಚಿಮ ವಲಯ ಐಜಿಪಿಗೆ ವರ್ಗಾವಣೆ

ಹೇಮಂತ್ ನಿಂಬಾಳ್ಕರ್
ಮಂಗಳೂರು, ಆ.7: ಪಶ್ಚಿಮ ವಲಯದ ಮಹಾನಿರೀಕ್ಷಕರಾಗಿರುವ ಹರಿಶೇಖರನ್ ಅವರನ್ನು ಬೆಂಗಳೂರು ಆಡಳಿತ ವಿಭಾಗಕ್ಕೆ ವರ್ಗಾವಣೆಗೊಳಿಸಿರುವ ರಾಜ್ಯ ಸರಕಾರ ತೆರವಾದ ಅವರ ಸ್ಥಾನಕ್ಕೆ ಹೇಮಂತ್ ನಿಂಬಾಳ್ಕರ್ ನಿಯುಕ್ತಿಗೊಂಡಿದ್ದಾರೆ.
ಮೂಲತಃ ಮಹಾರಾಷ್ಟ್ರದ ಕೊಲ್ಲಾಪುರದವರಾಗಿರುವ ನಿಂಬಾಳ್ಕರ್ 1998ರ ಐಪಿಎಸ್ ಬ್ಯಾಚ್ನವರಾಗಿದ್ದಾರೆ. ಇವರು ಮಂಗಳೂರು ಪಶ್ಚಿಮ ವಲಯದ 13ನೆ ಪೊಲೀಸ್ ಮಹಾನಿರೀಕ್ಷಕರಾಗಿದ್ದಾರೆ.
ಹೇಮಂತ್ ನಿಂಬಾಳ್ಕರ್ ಬೆಳಗಾವಿ ಮತ್ತು ಬಳ್ಳಾರಿಯಲ್ಲಿ ಎಸ್ಪಿಯಾಗಿ, ಬೆಂಗಳೂರಿನಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ, ಸಿಐಡಿ ಆರ್ಥಿಕ ಅಪರಾಧ ವಿಭಾಗಗಳ ಐಜಿಪಿ, ಭಯೋತ್ಪಾದಕ ನಿಗ್ರಹ ದಳ ಎಸ್ಪಿಯಾಗಿ ಸೇವೆ ಸಲ್ಲಿಸಿದ್ದರು. ಪಶ್ಚಿಮ ವಲಯ ವ್ಯಾಪ್ತಿಗೆ ದ.ಕ., ಉಡುಪಿ, ಚಿಕ್ಕಮಗಳೂರು ಹಾಗೂ ಉತ್ತರ ಜಿಲ್ಲೆಗಳು ಬರುತ್ತಿವೆ.
Next Story





