ಸಲಫಿ ದಾವಾ ಕಾಲೇಜಿನ ಪರೀಕ್ಷೆಯ ಫಲಿತಾಂಶ ಪ್ರಕಟ
ಮಂಗಳೂರು, ಆ.7: ಸಲಫಿ ಎಜುಕೇಶನ್ ಬೋರ್ಡ್ ವತಿಯಿಂದ ನಡೆಯಲ್ಪಡುವ ಸಲಫಿ ದಾವಾ ಕಾಲೇಜಿನ ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ.
ಹನೀಫ್ ಬೋಳಂತೂರು (ಪ್ರಥಮ), ಅನೀಸ್ ಬೋಳಂತೂರು (ದ್ವಿತೀಯ), ಬಾಸಿತ್ ಕುಂಜತ್ತಬೈಲ್ (ತೃತೀಯ) ರ್ಯಾಂಕ್ ಗಳಿಸಿದ್ದಾರೆ.
ಈವರೆಗೆ ನಗರದ ನೆಲ್ಲಿಕಾಯಿ ರಸ್ತೆಯ ದಾರುಲ್ ಖೈರ್‌ನಲ್ಲಿ ಕಾರ್ಯಾಚರಿಸುತ್ತಿದ್ದ ಸಲಫಿ ದಾವಾ ಕಾಲೇಜು ಇದೀಗ ಕಂಕನಾಡಿಯ ಸಲಫಿ ಸೆಂಟರ್‌ಗೆ ಸ್ಥಳಾಂತರಗೊಂಡಿದ್ದು, ಮೂರನೆ ವರ್ಷದ ತರಗತಿ ಪ್ರಾರಂಭಗೊಂಡಿದೆ ಎಂದು ಬೋರ್ಡ್‌ನ ಅಧ್ಯಕ್ಷ ವೌಲವಿ ಮುಸ್ತಫಾ ದಾರಿಮಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





