ಹೆಪ್ಟಾಥ್ಲಾನ್‌ನಲ್ಲಿ ಥಿಯಮ್‌ಗೆ ಚಿನ್ನ
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್

ಲಂಡನ್, ಆ.7: ಬೆಲ್ಜಿಯಂನ ನಫಿ ಥಿಯಮ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಹೆಪ್ಟಾಥ್ಲಾನ್‌ನಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. ಕಳೆದ ವರ್ಷ ರಿಯೋ ಒಲಿಂಪಿಕ್ಸ್‌ನಲ್ಲಿ ಥಿಯಮ್ ಚಿನ್ನದ ಪದಕ ಗೆದ್ದುಕೊಂಡಿದ್ದರು.
ರವಿವಾರ ನಡೆದ 800 ಮೀ. ಓಟದ ಹೀಟ್ಸ್ ನಲ್ಲಿ 2:21.42 ಸೆಕೆಂಡ್‌ನಲ್ಲಿ ಗುರಿ ತಲುಪಿದ ಥಿಯಮ್ ಒಟ್ಟು 6,784 ಅಂಕ ಗಳಿಸುವ ಮೂಲಕ ಹೆಪ್ಟಾಥ್ಲಾನ್‌ನಲ್ಲಿ ಮೊದಲ ಸ್ಥಾನ ಪಡೆದರು.
ಥಿಯಮ್ ಪ್ರತಿಸ್ಪರ್ಧಿ ಜರ್ಮನಿಯ ಕರೊಲಿನ್ ಚಾಫೆರ್ 2:15.34 ಸೆಕೆಂಡ್‌ನಲ್ಲಿ ಗುರಿ ತಲುಪಿ 6,696 ಅಂಕ ಗಳಿಸಿ ಬೆಳ್ಳಿ ಪದಕ ಜಯಿಸಿದ್ದಾರೆ.
ಜಾವೆಲಿನ್ ಎಸೆತದ ಸ್ಪರ್ಧೆಯಲ್ಲಿ 58.41 ಮೀ. ದೂರ ಜಾವೆಲಿನ್ ಎಸೆದು ಪ್ರೇಕ್ಷಕರ ಶ್ಲಾಘನೆಗೆ ಒಳಗಾಗಿದ್ದ ಹಾಲೆಂಡ್‌ನ ಅನೌಕ್ ವೆಟ್ಟೆರ್ ಒಟ್ಟು 6,636 ಅಂಕ ಗಳಿಸಿ ಕಂಚಿನ ಪದಕ ತನ್ನದಾಗಿಸಿಕೊಂಡರು.
Next Story





