Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಹಣ-ಹೆಣಗಳ ನಡುವೆ ಗುಜರಾತ್ ಚುನಾವಣಾ ಕಣ

ಹಣ-ಹೆಣಗಳ ನಡುವೆ ಗುಜರಾತ್ ಚುನಾವಣಾ ಕಣ

ವಾರ್ತಾಭಾರತಿವಾರ್ತಾಭಾರತಿ7 Aug 2017 11:58 PM IST
share
ಹಣ-ಹೆಣಗಳ ನಡುವೆ ಗುಜರಾತ್ ಚುನಾವಣಾ ಕಣ

ಒಂದು ರಾಜ್ಯವನ್ನು ಪ್ರತಿನಿಧಿಸುವ ರಾಜ್ಯಸಭಾ ಪ್ರತಿನಿಧಿಗಳ ಆಯ್ಕೆ ರಾಷ್ಟ್ರಮಟ್ಟದ ಸುದ್ದಿಯಾಗುತ್ತಿರುವುದು ಇದೇ ಮೊದಲಿರಬೇಕು. ಬಿಜೆಪಿ ನಾಯಕರ ಪಾಲಿಗೆ ಇದು ಪ್ರತಿಷ್ಠೆಯ ಪ್ರಶ್ನೆಯಾಗಿದ್ದರೆ ಕಾಂಗ್ರೆಸ್ ಪಾಲಿಗೆ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಗುಜರಾತ್‌ನಲ್ಲಿ ನಡೆದು ಮುಗಿಯಬಹುದಾಗಿದ್ದ ಒಂದು ರಾಜಕೀಯ ಬೆಳವಣಿಗೆ, ಕರ್ನಾಟಕದ ಬೆಂಗಳೂರಿನವರೆಗೂ ವಿಸ್ತರಿಸಿರುವುದೇ ಈ ಆಯ್ಕೆಯನ್ನು ಉಭಯ ಪಕ್ಷಗಳು ಎಷ್ಟು ಗಂಭೀರವಾಗಿ ತೆಗೆದುಕೊಂಡಿವೆೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಮಂಗಳವಾರ ನಡೆಯಲಿರುವ ಗುಜರಾತ್‌ನ ರಾಜ್ಯಸಭಾ ಚುನಾವಣೆಯು ಗುಜರಾತ್‌ನಲ್ಲೂ, ಕೇಂದ್ರದಲ್ಲೂ, ಕರ್ನಾಟಕದಲ್ಲೂ ಬೇರೆ ಬೇರೆ ಪರಿಣಾಮಗಳನ್ನು ಬೀರುವುದರಲ್ಲಿ ಎರಡು ಮಾತಿಲ್ಲ. ದೂರದ ಗುಜರಾತ್‌ನ ಸಂಘರ್ಷದಲ್ಲಿ ರಾಜ್ಯ ಸಚಿವ ಡಿ.ಕೆ.ಶಿವಕುಮಾರ್ ರಾಷ್ಟ್ರಮಟ್ಟದಲ್ಲಿ ಚರ್ಚೆಯ ವಸ್ತುವಾಗಿರುವುದು, ಐಟಿ ವಿಭಾಗವನ್ನೂ ಈ ಚುನಾವಣೆಯ ಉದ್ದೇಶಕ್ಕೆ ಬಳಸಿಕೊಂಡಿರುವುದು ಗುಜರಾತ್‌ನ ರಾಜಕೀಯ ಬೆಳವಣಿಗೆಗಳು ಅದೆಷ್ಟು ಪಾತಾಳ ತಲುಪಿದೆ ಎನ್ನುವುದನ್ನು ಹೇಳುತ್ತಿದೆ.

   ರಾಜ್ಯದಿಂದ ಮೇಲ್ಮನೆಗೆ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವೆ ಸ್ಮತಿ ಇರಾನಿಯವರ ೆ ಜೊತೆಗೆ ಕಾಂಗ್ರೆಸ್‌ನ ಹಿರಿಯ ನಾಯಕ ಅಹ್ಮದ್ ಪಟೇಲ್ ಅವರ ಆಯ್ಕೆಯೂ ಕೇಂದ್ರಸ್ಥಾನದಲ್ಲಿದೆ. ಅಹ್ಮದ್ ಪಟೇಲ್ ಆಯ್ಕೆಯನ್ನು ತಡೆಯುವ ಮೂಲಕ ಗುಜರಾತ್‌ನಲ್ಲಿ ಕಾಂಗ್ರೆಸ್‌ಗೆ ಮುಖಭಂಗ ಮಾಡುವುದು ಬಿಜೆಪಿಯ ಮುಖ್ಯ ಗುರಿಯಾಗಿದೆ. ಗುಜರಾತ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಎದುರಿಸುವುದಕ್ಕಾಗಿ ಬಿಜೆಪಿ ಹಮ್ಮಿಕೊಂಡ ಕಾರ್ಯತಂತ್ರದ ಭಾಗ ಇದು. ತನ್ನ ಉದ್ದೇಶಕ್ಕಾಗಿ ಬಿಜೆಪಿ ಗುಜರಾತ್‌ನಲ್ಲಿ ಹಣದ ಹೊಳೆಯನ್ನೇ ಹರಿಸಿದೆ. ಒಂದು ಕಾಲದಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅನುಸರಿಸಿದ ‘ಆಪರೇಷನ್ ಕಮಲ’ವನ್ನು ಗುಜರಾತ್ ತನ್ನ ರಾಜಕೀಯ ಉಳಿವಿಗಾಗಿ ಮಾದರಿಯಾಗಿಸಿಕೊಂಡಿದೆ. ಬಹಿರಂಗವಾಗಿಯೇ ಕಾಂಗ್ರೆಸ್ ಶಾಸಕರ ಹರಾಜು ಕೂಗುತ್ತಿದೆ. ಈಗಾಗಲೇ ಹಿರಿಯ ನಾಯಕ ಶಂಕರ್ ಸಿಂಗ್ ವೇಲಾ ಕಾಂಗ್ರೆಸ್‌ನಲ್ಲಿ ಬಂಡಾಯ ಸಾರಿದ್ದಾರೆ. ಪಕ್ಷದ ಆರು ಶಾಸಕರು ರಾಜೀನಾಮೆ ನೀಡಿದ್ದಾರೆ ಮತ್ತು ಬಿಜೆಪಿಯಿಂದ ‘ಕುದುರೆ ವ್ಯಾಪಾರ’ದ ಪ್ರಯತ್ನಗಳಿಂದ ರಕ್ಷಿಸಿಕೊಳ್ಳಲು ಬೆಂಗಳೂರಿಗೆ 44 ಶಾಸಕರ ಸ್ಥಳಾಂತರಗೊಳಿಸಬೇಕಾದ ಅನಿವಾರ್ಯ ಸ್ಥಿತಿಗೆ ಕಾಂಗ್ರೆಸ್ ಸಿಲುಕಿಕೊಂಡಿತು

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ರಾಜಕೀಯ ಕಾರ್ಯದರ್ಶಿ ಯಾಗಿರುವ ಪಟೇಲ್‌ಗೆ ಗೆಲ್ಲಲು 45 ಮತಗಳು ಅಗತ್ಯವಾಗಿವೆ. ಪಕ್ಷವು ಸದ್ಯ 44 ಶಾಸಕರ ಬೆಂಬಲವನ್ನು ಹೊಂದಿದ್ದು, ಕಳೆದೊಂದು ವಾರಕ್ಕಿಂತ ಹೆಚ್ಚಿನ ಅವಧಿಗೆ ಬೆಂಗಳೂರು ಬಳಿಯ ರೆಸಾರ್ಟ್‌ನಲ್ಲಿ ಮೊಕ್ಕಾಂ ಹೂಡಿದ್ದ ಅವರೆಲ್ಲ ಸೋಮವಾರ ತವರು ರಾಜ್ಯಕ್ಕೆ ಮರಳಿದ್ದು, ಅವರನ್ನು ಆನಂದ್ ಜಿಲ್ಲೆಯ ರೆಸಾರ್ಟ್‌ವೊಂದರಲ್ಲಿ ಇರಿಸಲಾಗಿದೆ.ಈ ಶಾಸಕರ ಪೈಕಿ ಯಾರೊಬ್ಬರೂ ಅಡ್ಡ ಮತದಾನ ಮಾಡದಿದ್ದರೂ ಅಥವಾ ನೋಟಾ ಆಯ್ಕೆಯನ್ನು ಬಳಸದಿದ್ದರೂ ಪಟೇಲ್‌ಗೆ ಗೆಲ್ಲಲು ಒಂದು ಹೆಚ್ಚುವರಿ ಮತ ಅಗತ್ಯವಾಗಿದೆ.ಮೇಲ್ಮನೆಯ ಮೂರು ಸ್ಥಾನಗಳಿಗಾಗಿ ನಾಲ್ವರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಶಾ ಮತ್ತು ಇರಾನಿ ಜೊತೆಗೆ ಇತ್ತೀಚೆಗೆ ಕಾಂಗ್ರೆಸ್ ತೊರೆದು ಆಡಳಿತ ಪಕ್ಷವನ್ನು ಸೇರಿರುವ ಬಲವಂತಸಿಂಹ್ ರಾಜಪೂತ್ ಅವರೂ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್ ಪಕ್ಷವು ತನ್ನ ಅಭ್ಯರ್ಥಿಯ ಗೆಲುವಿಗಾಗಿ ಇಬ್ಬರು ಎನ್‌ಸಿಪಿ ಶಾಸಕರು ಹಾಗೂ ಜೆಡಿಯು ಮತ್ತು ಗುಜರಾತ್ ಪರಿವರ್ತನ್ ಪಾರ್ಟಿಯ ತಲಾ ಓರ್ವ ಶಾಸಕರ ಬೆಂಬಲವನ್ನು ನೆಚ್ಚಿಕೊಂಡಿದೆ.ಆದರೆ, ಚುನಾವಣೆಯಲ್ಲಿ ಯಾವ ಪಕ್ಷವನ್ನು ಬೆಂಬಲಿಸಬೇಕು ಎಂದು ತನ್ನ ಪಕ್ಷವು ಈವರೆಗೂ ನಿರ್ಧರಿಸಿಲ್ಲ ಎಂದು ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್ ಅವರು ರವಿವಾರ ಹೇಳಿದ್ದರು.

 ಅಹ್ಮದ್ ಪಟೇಲ್ ಅವರು ತನ್ನ ನಾಮಪತ್ರ ಸಲ್ಲಿಸುವಾಗ ಎನ್‌ಸಿಪಿ ಮತ್ತು ಜೆಡಿಯು ಶಾಸಕರು ಅವರ ಜೊತೆಯಲ್ಲಿದ್ದರು ಎನ್ನುವುದು ಗಮನಾರ್ಹವಾಗಿದೆ.ತನ್ನ ಮತಕ್ಷೇತ್ರಕ್ಕೆ ಏನಾದರೂ ಕೊಡುಗೆ ನೀಡುವವರಿಗೆ ಮಾತ್ರ ತಾನು ಬೆಂಬಲಿಸುವುದಾಗಿ ಜೆಡಿಯು ಶಾಸಕ ಛೋಟುಭಾಯಿ ವಸಾವಾ ಹೇಳುತ್ತಿದ್ದಾರೆ.

 ರಾಜ್ಯ ವಿಧಾನಸಭೆಯಲ್ಲಿ ತನ್ನ 51 ಶಾಸಕರ ಪೈಕಿ ಬೆಂಗಳೂರಿಗೆ ಹೋಗದಿದ್ದ ಮತ್ತು ವೇಲಾ ಪಾಳಯದ ನಿಕಟವರ್ತಿಗಳೆನ್ನಲಾದ ಏಳು ಶಾಸಕರ ಪೈಕಿ ಕೆಲವರ ಬೆಂಬಲವನ್ನು ಮರಳಿ ಪಡೆಯುವ ಆಶಯವನ್ನೂ ಕಾಂಗ್ರೆಸ್ ಹೊಂದಿದೆ. ಇವರಲ್ಲಿ ವೇಲಾ ಕೂಡ ಸೇರಿದ್ದಾರೆ. ವೇಲಾ ಪಕ್ಷವನ್ನು ತೊರೆಯುವ ಮುನ್ನ ಕಾಂಗ್ರೆಸ್ ಪಕ್ಷವು 182 ಸದಸ್ಯ ಬಲದ ವಿಧಾನ ಸಭೆಯಲ್ಲಿ 57 ಶಾಸಕರನ್ನು ಹೊಂದಿತ್ತು. ಬಳಿಕ ಆರು ಶಾಸಕರು ರಾಜೀನಾಮೆ ನೀಡುವ ಮೂಲಕ ಪಕ್ಷದ ಬಲ 51ಕ್ಕೆ ಕುಸಿದಿದ್ದರೆ, ಇದರ ಫಲವಾಗಿ ಸದನದ ಬಲವೂ 176ಕ್ಕಿಳಿದಿದೆ.ಅಭ್ಯರ್ಥಿಯೋರ್ವ ಗೆಲ್ಲಬೇಕಾದರೆ ಒಟ್ಟು ಮತಗಳ ನಾಲ್ಕನೆ ಒಂದು ಭಾಗ ಮತ್ತು ಒಂದು ಹೆಚ್ಚುವರಿ ಮತ ಪಡೆಯಬೇಕಾಗುತ್ತದೆ. ಅಂದರೆ ಗೆಲ್ಲಲು ಕನಿಷ್ಠ 45 ಮತಗಳು ಅಗತ್ಯವಾಗಿವೆ.121 ಶಾಸಕರನ್ನು ಹೊಂದಿರುವ ಬಿಜೆಪಿ ತನ್ನ ಇಬ್ಬರು ಅಭ್ಯರ್ಥಿಗಳನ್ನು ಸುಲಭವಾಗಿ ಗೆಲ್ಲಿಸಬಹುದು. ಆದರೆ ಅದರ ಮೂರನೆ ಅಭ್ಯರ್ಥಿಯ ಪಾಲಿಗೆ ಕೇವಲ 31 ಮತಗಳು ಉಳಿಯಲಿದ್ದು, 14 ಮತಗಳ ಕೊರತೆಯನ್ನು ಎದುರಿಸುತ್ತಿದೆ. ಅದೇನೇ ಆದರೂ ಅಹ್ಮದ್ ಪಟೇಲ್‌ರನ್ನು ಸೋಲಿಸಿಯೇ ಸಿದ್ಧ ಎನ್ನುವ ಹಟವನ್ನು ಬಿಜೆಪಿ ಹೊಂದಿರುವುದರಿಂದ, ಈ ಗೆಲುವು ಸೋಲು ಮುಂದಿನ ವಿಧಾನಸಭಾ ಚುನಾವಣೆಯ ಮೇಲೂ ಪರಿಣಾಮ ಬೀರಲಿದೆ.

 ಕೊನೆಯ ಕ್ಷಣದಲ್ಲಿ ಅಹ್ಮದ್ ಪಟೇಲ್ ಅವರೇನಾದರೂ ಗೆದ್ದರೆಂದಾದರೆ ಕರ್ನಾಟಕದಲ್ಲಿ ಡಿ.ಕೆ.ಶಿವಕುಮಾರ್ ಅವರ ಪ್ರಭಾವ ಇನ್ನಷ್ಟು ಹೆಚ್ಚಲಿದೆ. ಅವರು ಕಾಂಗ್ರೆಸ್‌ನ ರಾಷ್ಟ್ರಮಟ್ಟದ ನಾಯಕರಿಗೆ ಮತ್ತಷ್ಟು ಹತ್ತಿರವಾಗಲಿದ್ದಾರೆ. ಅದು ಕರ್ನಾಟಕ ಕಾಂಗ್ರೆಸ್ ರಾಜಕೀಯದ ಮೇಲೆ ತನ್ನದೇ ಪರಿಣಾಮ ಬೀರಬಹುದು. ಯಾಕೆಂದರೆ, ಅಹ್ಮದ್ ಪಟೇಲ್ ಗೆಲುವಿನಲ್ಲಿ ಡಿ.ಕೆ.ಶಿಯ ಪಾತ್ರವೂ ಬಹುದೊಡ್ಡದಿದೆ. ಇದೇ ಸಂದರ್ಭದಲ್ಲಿ ಅಹ್ಮದ್ ಪಟೇಲ್ ಸೋತದ್ದೇ ಆದರೆ, ಮುಂದಿನ ಗುಜರಾತ್ ವಿಧಾನಸಭಾ ಚುನಾವಣೆಯನ್ನು ಬಿಜೆಪಿಯು ಇನ್ನಷ್ಟು ಕುಲಗೆಡಿಸಲಿದೆ. ಗುಜರಾತ್‌ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಬಿಜೆಪಿಗೆ ಬಹಳಷ್ಟು ಸವಾಲುಗಳಿವೆ. ಚುನಾವಣೆಯನ್ನು ಹಿಂದಿನಂತೆ ಸುಲಭವಾಗಿ ಗೆಲ್ಲುವುದು ಅಸಾಧ್ಯ. ಈ ಕಾರಣದಿಂದ ಕೇಂದ್ರವು ತನ್ನ ಅಧಿಕಾರ, ಹಣ ಮತ್ತು ಗೂಂಡಾಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಿ, ಗುಜರಾತ್ ಚುನಾವಣೆಯನ್ನು ಗೆಲ್ಲಲು ಯತ್ನಿಸಲಿದೆ. ಮುಂದಿನ ಗುಜರಾತ್ ಚುನಾವಣೆಯ ಭೀಕರತೆಯ ಸೂಚನೆಗಳನ್ನು ನಾವು ಈ ರಾಜ್ಯಸಭಾ ಚುನಾವಣೆಯ ಪೈಪೋಟಿಯಲ್ಲಿ ಗುರುತಿಸಬಹುದು. ಇತ್ತೀಚೆಗೆ ರಾಹುಲ್‌ಗಾಂಧಿಯವರ ವಾಹನದ ಮೇಲೆ ನಡೆದ ದಾಳಿಯೂ ಇದರ ಭಾಗವೇ ಆಗಿದೆ ಎನ್ನುವುದನ್ನು ಗಮನಿಸಬೇಕು. ಅಂದರೆ ಚುನಾವಣೆಯಲ್ಲಿ ಅಧಿಕಾರ, ಹಣ ಮತ್ತು ಹೆಣಗಳ ಪಾತ್ರಗಳನ್ನು ಈಗಾಗಲೇ ಸಂಬಂಧಪಟ್ಟ ರಾಜಕೀಯ ನಾಯಕರು ಗುರುತಿಸಿಕೊಂಡಿದ್ದಾರೆ. ಈ ಗುಜರಾತ್ ವಿಧಾನಸಭಾ ಚುನಾವಣೆಯ ಪರಿಣಾಮ ಮುಂದೆ ದೇಶಾದ್ಯಂತ ಬೇರೆ ಬೇರೆ ರೀತಿಯಲ್ಲಿ ದೇಶವನ್ನು ಕಾಡಲಿದೆ. ಅದನ್ನು ಮುಖಾಮುಖಿಯಾಗಲು ನಾವೀಗಲೇ ಸಿದ್ಧರಾಗಿ ನಿಲ್ಲಬೇಕಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X