ಬೈಕ್ ಢಿಕ್ಕಿ: ಸವಾರರಿಗೆ ಗಾಯ

ಕಡಬ, ಆ. 9: ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಳಾರ ಎಂಬಲ್ಲಿ ಬೈಕ್ ಹಾಗೂ ಹೋಂಡಾ ಆ್ಯಕ್ಟಿವಾ ಮಧ್ಯೆ ಢಿಕ್ಕಿ ಸಂಭವಿಸಿ ಸವಾರರಿಬ್ಬರು ಗಾಯಗೊಂಡ ಘಟನೆ ಬುಧವಾರ ನಡೆದಿದೆ.
ಘಟನೆಯಲ್ಲಿ ಹೋಂಡಾ ಆ್ಯಕ್ಟಿವಾ ಸವಾರ ಕಡಬ ಕುಟ್ರುಪ್ಪಾಡಿ ನಿವಾಸಿ ಪದ್ಮಯ್ಯ ಗೌಡ(48) ಹಾಗೂ ಬೈಕ್ ಸವಾರ ಕಾಣಿಯೂರು ಸಮೀಪದ ಬರೆಪ್ಪಾಡಿ ಕಾಮಣ ನಿವಾಸಿ ಪದ್ಮಯ್ಯ(55) ಎಂಬವರು ಗಾಯಗೊಂಡಿದ್ದು, ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Next Story





