ಶೌಚಾಲಯ ಪ್ರಾರಂಭಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಗುಂಡ್ಲುಪೇಟೆ, ಆ.9: ಶೌಚಾಲಯಗಳನ್ನು ಪ್ರಾರಂಭಿಸುವಂತೆ ಒತ್ತಾಯಿಸಿ ಬಹುಜನ ಸಮಾಜ ಪಾರ್ಟಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಪಟ್ಟಣದ ಹೊಸೂರು ರಸ್ತೆಯ 20 ಮತ್ತು 21ನೇ ವಾರ್ಡ್‌ನಲ್ಲಿ ಲಕ್ಷಾಂತರ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಿರುವ ಶೌಚಾಲಯಗಳು ಸಾರ್ವಜನಿಕರ ಬಳಕೆಗೆ ಬಾರದೇ ಪಾಳು ಬೀಳುತ್ತಿದೆ. ಇದನ್ನು ಪ್ರಾರಂಭ ಮಾಡಿ ಸಾರ್ವಜನಿಕರ ಬಳಕೆಗೆ ನೀಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
20 ಮತ್ತು 21ನೇ ವಾರ್ಡಿನಲ್ಲಿ ಹಿಂದುಳಿದ ವರ್ಗಗಳ ಜನರು, ದಲಿತರೇ ಹೆಚ್ಚಾಗಿ ವಾಸಿಸುವ ಈ ಪ್ರದೇಶದಲ್ಲಿ ಮಹಿಳೆಯರು, ಮಕ್ಕಳು ಬಯಲಲ್ಲಿ ಮಲ-ಮೂತ್ರ ವಿಸರ್ಜಿಸುವವರ ಸಂಖ್ಯೆ ಹೆಚ್ಚಾಗಿದ್ದು, ಇಲ್ಲಿ ವಾಸಿಸುವವರಿಗೆ ಕಿರಿಕಿರಿಯುಂಟಾಗುತ್ತಿದೆ. ಇಲ್ಲಿನ ನಿವಾಸಿಗಳಿಗೆ ಬಯಲು ಶೌಚದಿಂದ ಬರುವ ದುರ್ವಾಸನೆಯಿಂದ ಅನಾರೋಗ್ಯ ಮತ್ತು ಸಾಂಕ್ರಾಮಿಕ ರೋಗಗಳು ಬರುತ್ತಿದೆ. ಈಗಾಗಲೇ ಪುರಸಭಾ ವತಿಯಿಂದ ನಿಮಾರ್ಣವಾಗಿರುವ 20ನೇ ಮತ್ತು 21ನೇ ವಾರ್ಡಿನಲ್ಲಿರುವ ಸಾರ್ವಜನಿಕ ಶೌಚಾಲಯವನ್ನು ಪ್ರಾರಂಭಿಸಿದರೆ ಈ ಭಾಗದ ಜನರಿಗೆ ಹಾಗೂ ಈ ರಸ್ತೆಯಲ್ಲಿ ಸಂಚಾರಿಸುವ ಸಾರ್ವಜನಿಕರಿಗೆ ಉಪಯೋಗವಾಗುತ್ತದೆ. ಈ ನಿಟ್ಟಿನಲ್ಲಿ ಪುರಸಭೆ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಿ.ಎಸ್.ಪಿ ಟೌನ್‌ಅಧ್ಯಕ್ಷ ಸರ್ಕಲ್ ರಮೇಶ್, ಉಪಾಧ್ಯಕ್ಷ ಗೊಪಾಲ್, ಪ್ರಧಾನ ಕಾರ್ಯದರ್ಶಿ ಶಿವು ಹೊಸೂರು, ಪದಾಧಿಕಾರಿಗಳಾದ ಹರೀಶ್, ಯೋಗೇಶ್, ವೀಣಾ, ವೇಣು, ಅನಿಲ್, ತಾಲ್ಲೂಕು ಘಟಕಡ ಯೋಗೇಶ್, ಶ್ರೀನಿವಾಸ್ ಕುಣಗಳ್ಳಿ, ನಂದಕುಮಾರಕಣ್ಣೇಗಾಲ, ಜಿ.ಕೆಉಮೇಶ್ ಇತರರು ಹಾಜರಿದ್ದರು.





