Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಕಾವ್ಯಾ ಪೂಜಾರಿ ಪರ ಬೀದಿಗಿಳಿದ...

ಕಾವ್ಯಾ ಪೂಜಾರಿ ಪರ ಬೀದಿಗಿಳಿದ ವಿದ್ಯಾರ್ಥಿಗಳು

ಎಡ-ಬಲ ಸಹಿತ 20ಕ್ಕೂ ಅಧಿಕ ಸಂಘಟನೆಗಳ ಸಾಥ್: ಕಾಲ್ನಡಿಗೆ ಜಾಥಾ ನಡೆಸಿ ಗಮನಸೆಳೆದ ವಿದ್ಯಾರ್ಥಿ ಸಮೂಹ

ವಾರ್ತಾಭಾರತಿವಾರ್ತಾಭಾರತಿ9 Aug 2017 7:19 PM IST
share
ಕಾವ್ಯಾ ಪೂಜಾರಿ ಪರ ಬೀದಿಗಿಳಿದ ವಿದ್ಯಾರ್ಥಿಗಳು

ಮಂಗಳೂರು, ಆ.9: ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಎಸೆಸೆಲ್ಸಿ ವಿದ್ಯಾರ್ಥಿನಿ, ರಾಷ್ಟ್ರೀಯ ಬ್ಯಾಡ್ಮಿಂಟನ್ ಪಟು, ಕಟೀಲು ದೇವರಗುಡ್ಡೆಯ ಲೋಕೇಶ್-ಬೇಬಿ ಪೂಜಾರಿ ದಂಪತಿಯ ಪುತ್ರಿ ಕಾವ್ಯಾ ಪೂಜಾರಿಯ ನಿಗೂಢ ಮರಣದ ಸತ್ಯಾಂಶ ಬಯಲಿಗೆ ಬರಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು, ಕುಟುಂಬಕ್ಕೆ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿ ಜಿಲ್ಲೆಯ ವಿವಿಧ ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳು ಬುಧವಾರ ಬೀದಿಗಿಳಿದು ಹೋರಾಟ ನಡೆಸಿದ್ದಾರೆ.

‘ಜಸ್ಟೀಸ್ ಫಾರ್ ಕಾವ್ಯ ಹೋರಾಟ ಸಮಿತಿ’ಯ ನೇತೃತ್ವದಲ್ಲಿ ಮಂಗಳೂರಿನಲ್ಲಿ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಎಡ ಮತ್ತು ಬಲ ಸಹಿತ ಸುಮಾರು 20ಕ್ಕೂ ಅಧಿಕ ವಿವಿಧ ಸಂಘಟನೆಗಳ ಕಾರ್ಯಕರ್ತರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಪಾಲ್ಗೊಂಡರು.

ಈ ಮಧ್ಯೆ ಜ್ಯೋತಿ ಅಂಬೇಡ್ಕರ್ ವೃತ್ತದಿಂದ ದ.ಕ.ಜಿಲ್ಲಾಧಿಕಾರಿ ಕಚೇರಿಗೆ ಕಾಲ್ನಡಿಗೆ ಜಾಥಾ ನಡೆಸಲು ಪೊಲೀಸರು ಅನುಮತಿ ನೀಡದಿದ್ದರೂ ಕೂಡ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಕಪ್ಪು ಪಟ್ಟಿ ಧರಿಸಿ ಜಾಥಾ ನಡೆಸಿ ಗಮನ ಸೆಳೆದರಲ್ಲದೆ, ಕಾವ್ಯಾ ಪೂಜಾರಿಗೆ ನ್ಯಾಯ ದೊರಕಿಸಿ ಕೊಡುವವರೆಗೂ ಹೋರಾಟ ಮುಂದುವರಿಸುವುದಾಗಿ ಸ್ಪಷ್ಟಪಡಿಸಿದರು.

ಧರಣಿಯಲ್ಲಿ ವಿವಿಧ ಪಕ್ಷಗಳ ಹಾಗೂ ಸಂಘಟನೆಗಳ ಮುಖಂಡರಾದ ಪಿ.ಬಿ. ಡೇಸಾ, ಎಚ್.ಎಸ್. ಸಾಯಿರಾಂ, ಪದ್ಮನಾಭ್, ಸುನೀಲ್ ಕುಮಾರ್ ಬಜಾಲ್, ಅಶೋಕ್ ಕೊಂಚಾಡಿ, ರಘುವೀರ್ ಸೂಟರ್‌ಪೇಟೆ, ವಿಷ್ಣುಮೂರ್ತಿ, ರಾಬರ್ಟ್ ರೊಝಾರಿಯೊ, ಅನಿಲ್‌ದಾಸ್, ಯಶವಂತ ಮರೋಳಿ, ದಯಾನಂದ ಶೆಟ್ಟಿ, ಯಶವಂತ ಆಚಾರಿ, ಯಶವಂತ ಪೂಜಾರಿ, ಉದಯ ಪೂಜಾರಿ, ರಾಕೇಶ್ ಪೂಜಾರಿ, ಯೋಗೀಶ್ ಜಪ್ಪಿನಮೊಗರು, ದೀಪಕ್ ಕೋಟ್ಯಾನ್, ರವೀಂದ್ರ ಪೂಜಾರಿ, ಮಾಧುರಿ ಬೋಳಾರ್, ಸುಧೀರ್ ಶೆಟ್ಟಿ, ಸಂತೋಷ್ ಬಜಾಲ್, ದೀಕ್ಷಿತ್ ಶೆಟ್ಟಿ, ರಾಘವೇಂದ್ರ, ಎಂ. ದೇವದಾಸ್, ರಘು ಎಕ್ಕಾರು, ಆನಂದ ಬೆಳ್ಳಾರೆ, ಕೃಷ್ಣಾನಂದ, ವಿಶುಕುಮಾರ್, ವಿಜಯಲಕ್ಷ್ಮಿ ಪಂಪವೆಲ್, ಕರುಣಾಕರ, ಉದಯ ಕುಮಾರ್ ಪೂಜಾರಿ, ದೀಪಕ್ ಶೆಟ್ಟಿಗಾರ್, ಜಯಂತಿ ಬಿ.ಶೆಟ್ಟಿ, ಸಬಿತಾ ಮಿಸ್ಕಿತ್, ರತ್ನಾಕರ ಸುವರ್ಣ, ಪೂರ್ಣಿಮಾ ಗಣೇಶ್, ಆಶಾ ಡಿಸಿಲ್ವಾ, ಸುಧೀರ್ ಶೆಟ್ಟಿ, ಶಾಶ್ವತ ಕೊಟ್ಟಾರಿ, ಸೈಯದ್, ಗೀತಾ ಬಾಯಿ ಮತ್ತಿತರರು ಪಾಲ್ಗೊಂಡಿದ್ದರು.

ಯಾರ್ಯಾರು ಏನೇನು ಹೇಳಿದರು..?

ರಾಜಕಾರಣಿಗಳು ಮೂಗು ತೂರಿಸಬೇಡಿ

ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ನಲ್ಲಿರುವ ರಾಜಕಾರಣಿಗಳೇ... ಈ ವಿಷಯದಲ್ಲಿ ನೀವ್ಯಾರೂ ಮೂಗು ತೂರಿಸಬೇಡಿ. ಇದು ರಾಜಕೀಯ ಹೋರಾಟ ಅಲ್ಲ. ಕಾವ್ಯಾಳಿಗೆ ಅನ್ಯಾಯ ಆಗಿದೆ. ಆಕೆಗೆ ನ್ಯಾಯ ದೊರಕಿಸಿಕೊಡಲು ನಾವೆಲ್ಲಾ ಇಲ್ಲಿ ಒಂದಾಗಿದ್ದೇವೆ. ಇದನ್ನು ಹತ್ತಿಕ್ಕುವ ಪ್ರಯತ್ನ ಮಾಡಬೇಡಿ. ಕಾವ್ಯಾ ಖಂಡಿತಾ ಆತ್ಮಹತ್ಯೆ ಮಾಡಿಲ್ಲ, ಆಕೆಯ ಸಾವಿನ ಬಗ್ಗೆ ಸಂಶಯವಿದೆ. ಆ ಬಗ್ಗೆ ತನಿಖೆಯಾಗಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. 

ಕವಿತಾ ಸನಿಲ್,  ಮೇಯರ್, ಮಂಗಳೂರು ಮಹಾನಗರ ಪಾಲಿಕೆ

ಬಂಟ-ಬಿಲ್ಲವರ ನಡುವಿನ ಹೋರಾಟ ಅಲ್ಲ
ಇದನ್ನು ಬಂಟ ಮತ್ತು ಬಿಲ್ಲವರ ನಡುವಿನ ಹೋರಾಟ ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಆದರೆ, ಇದು ಅಂತಹ ಹೋರಾಟ ಅಲ್ಲ. ನಮ್ಮೊಡನೆ ದಲಿತರು, ಮುಸ್ಲಿಮರು, ಕ್ರೈಸ್ತರೂ ಇದ್ದಾರೆ. ನೊಂದ ಬಾಲಕಿ ಕಾವ್ಯಾ ಪರ ಎಲ್ಲರೂ ಕೈ ಜೋಡಿಸಿದ್ದಾರೆ. ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸುವೆವು.

ದೀಪಕ್ ಕೋಟ್ಯಾನ್, ಬಿಲ್ಲವರ ಏಕೀಕರಣ ಸಮಿತಿಯ ಮುಖಂಡ

10 ವರ್ಷದಲ್ಲಿ 11 ಆತ್ಮಹತ್ಯೆ
ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಕಳೆದ 10 ವರ್ಷಗಳಲ್ಲಿ ಎಷ್ಟು ಆತ್ಮಹತ್ಯೆ ನಡೆದಿದೆ ಎಂದು ನಾನು ಆರ್‌ಟಿಐ ಕಾಯ್ದೆ ಮೂಲಕ ಅರ್ಜಿ ಹಾಕಿದ್ದೆ. ಆದರೆ, ಉತ್ತರ ಸಿಕ್ಕಿರಲಿಲ್ಲ. ಕಾವ್ಯಾ ಪೂಜಾರಿಯ ನಿಗೂಢ ಮರಣದ ಬಳಿಕ ಅರ್ಜಿಯ ಬಗ್ಗೆ ಒತ್ತಡ ಹಾಕಿದೆ. ಅದರಂತೆ ಮಾಹಿತಿ ಹಕ್ಕು ಕಾಯ್ದೆಯ ಮೂಲಕ ಉತ್ತರ ಬಂದಿದೆ. ಅಂದರೆ ಕಳೆದ 10 ವರ್ಷದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ 11 ಆತ್ಮಹತ್ಯೆಯಾಗಿದೆ. ಈ ಬಗ್ಗೆ ತನಿಖೆಯಾಗಬೇಕು. ವಿದ್ಯಾರ್ಥಿಗಳ ಹೆತ್ತವರು ಹೋರಾಟ ಮಾಡಲು ಹಿಂದೇಟು ಹಾಕಿರುವುದರಿಂದ ಪ್ರಕರಣಗಳು ಮುಚ್ಚಿ ಹೋಗುತ್ತಿದೆ. ಕಾವ್ಯಾಳ ಹೆತ್ತವರು ಹೋರಾಟಕ್ಕಾಗಿ ಮುನ್ನುಗ್ಗಿದ ಕಾರಣ ಇಂತಹ ಹೋರಾಟ ನಡೆಸಲು ಸಾಧ್ಯವಾಯಿತು.

ನಿತಿನ್ ಕುತ್ತಾರ್, ಎಸ್‌ಎಫ್‌ಐ ದ.ಕ.ಜಿಲ್ಲಾ ಮುಖಂಡ

ಹಿಂದುಳಿದ ವರ್ಗ ಬಲಿಪಶು
ಜಿಲ್ಲೆಯಲ್ಲಿ ಕೋಮುಗಲಭೆ, ಅಹಿತಕರ ಘಟನೆಗಳು ನಡೆದಾಗಲೆಲ್ಲಾ ಬಹುಸಂಖ್ಯಾತರಾಗಿರುವ ಜಿಲ್ಲೆಯ ಹಿಂದುಳಿದ ವರ್ಗವು ಹೆಚ್ಚು ಬಲಿಪಶು ಆಗುತ್ತಿವೆ. ಇದನ್ನು ಹಿಂದುಳಿದ ವರ್ಗದ ಯುವ ಜನಾಂಗ ಅರ್ಥ ಮಾಡಿಕೊಳ್ಳಬೇಕು. ಕಾವ್ಯಾಳಿಗಾದ ಅನ್ಯಾಯದ ವಿರುದ್ಧ ಹೋರಾಟ ತೀವ್ರಗೊಳ್ಳಬೇಕು.

ನವೀನ್‌ಚಂದ್ರ ಡಿ.ಸುವರ್ಣ, ಅಧ್ಯಕ್ಷರು, ಅಖಿಲ ಭಾರತ ಬಿಲ್ಲವರ ಯೂನಿಯನ್

ಮಂಪರು ಪರೀಕ್ಷೆಯಾಗಲಿ
ಜಿಲ್ಲಾ ಉಸ್ತುವಾರಿ ಸಚಿವರು ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದ್ದಾರೆ. ಆದರೂ ನ್ಯಾಯ ಸಿಗುವವರೆಗೆ ಹೋರಾಟ ಮಾಡಬೇಕಿದೆ. ಒಂದು ವೇಳೆ ನ್ಯಾಯ ಸಿಗದಿದ್ದರೆ ಉಸ್ತುವಾರಿ ಸಚಿವರ ಸಹಿತ ಮುಖ್ಯಮಂತ್ರಿಯ ವಿರುದ್ಧವೂ ಪ್ರತಿಭಟನೆ ಮಾಡಲು ನಾವು ಹೇಸುವುದಿಲ್ಲ. ಪ್ರಕರಣವನ್ನು ಸಿಐಡಿ ಅಥವಾ ಸಿಬಿಐಗೆ ವಹಿಸಬೇಕು. ಜೊತೆಗೆ ಶಂಕಿತರ ಮಂಪರು ಪರೀಕ್ಷೆ ಮಾಡಿಸಬೇಕು.

ಕೆ. ಅಶ್ರಫ್ (ಮಾಜಿ ಮೇಯರ್), ಅಧ್ಯಕ್ಷರು, ದ.ಕ.ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟ

ನೀವು ಸುಮ್ಮನಿರುತ್ತಿದ್ದೀರಾ?
ಕಾವ್ಯಾಳಿಗಾದ ಅನ್ಯಾಯದ ವಿರುದ್ಧ ನಡೆಯುವ ಈ ಹೋರಾಟವನ್ನು ಹತ್ತಿಕ್ಕಲು ಆಳ್ವಾರ ಪರವಿರುವ ಕೆಲವರು ಪ್ರಯತ್ನ ನಡೆಸಿದ್ದರು. ಸಂಸ್ಥೆಯ ಹಾಗು ಆಳ್ವಾರ ಹೆಸರು ಎತ್ತಬಾರದು ಎಂದು ಸೂಚಿಸಿದ್ದರು. ಆದರೆ, ನಾವು ಅವೆಲ್ಲವನ್ನೂ ಗಣನೆಗೆ ತೆಗೆದುಕೊಳ್ಳದೆ ಕಾವ್ಯಾಳ ಪರ ಹೋರಾಟಕ್ಕಿಳಿದಿದ್ದೇವೆ. ಕಾವ್ಯಾಳ ಸ್ಥಿತಿ ಆಳ್ವಾರ ಪರ ನಿಂತ ಪ್ರಮುಖರ ಮನೆಯ ಹೆಣ್ಮಕ್ಕಳಿಗಾಗಿದ್ದರೆ ನೀವು ಇಂತಹ ಹೋರಾಟ ಮಾಡದೆ ಸುಮ್ಮನಿರುತ್ತಿದ್ದಿರಾ?, ಕಾವ್ಯಾಳ ಕುಟುಂಬಕ್ಕೆ ಪರಿಹಾರ ಕಲ್ಪಿಸಬೇಕು, ವಿಶೇಷ ತಂಡದಿಂದ ತನಿಖೆ ನಡೆಸಬೇಕು.

ದಿನಕರ ಶೆಟ್ಟಿ, ಮುಖಂಡರು ‘ಜಸ್ಟೀಸ್ ಫಾರ್ ಕಾವ್ಯ ಹೋರಾಟ ಸಮಿತಿ’

ಹೋರಾಟದಿಂದ ಹಿಂದೆ ಸರಿಯಲಾರೆ
ಮೋಹನ್ ಆಳ್ವರಲ್ಲಿ ಹಣವಿರಬಹುದು, ಅಧಿಕಾರದ ಬಲವಿರಬಹುದು. ಆದರೆ, ನನ್ನ ಮಗಳಿಗಾದ ಅನ್ಯಾಯದ ವಿರುದ್ಧ ಬೀದಿಗಿಳಿದಾಗಿದೆ. ನ್ಯಾಯ ಸಿಗುವವರೆಗೆ ಹೋರಾಟ ಮಾಡುವೆ. ಅದರಿಂದ ಹಿಂದೆ ಸರಿಯಲಾರೆ.

ಬೇಬಿ ಪೂಜಾರಿ (ಕಾವ್ಯಾ ಪೂಜಾರಿಯ ತಾಯಿ)

ನಮ್ಮ ರಕ್ಷಣೆ ನಾವೇ ಮಾಡೋಣ
ನಾಲ್ಕು ವರ್ಷಗಳ ಹಿಂದೆ 
ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿ ಸಾಕಷ್ಟು ಹೋರಾಟ ಮಾಡಿದರೂ ನ್ಯಾಯ ಸಿಕ್ಕಿಲ್ಲ. ಕಾವ್ಯಾ ಪೂಜಾರಿ ಪ್ರಕರಣವೂ ಅದರಂತೆ ಆಗಬಾರದು. ನ್ಯಾಯ ಸಿಗುವವರೆಗೂ ಹೋರಾಟ ಮಾಡಬೇಕು. ಜೊತೆಗೆ ವಿದ್ಯಾರ್ಥಿಗಳು ಸ್ವಯಂ ರಕ್ಷಣೆಯ ಮಾರ್ಗ ಕಂಡುಕೊಳ್ಳಬೇಕು.

ಅತ್ರಾಡಿ ಅಮೃತಾ ಶೆಟ್ಟಿ, (ಲೇಖಕಿ, ಹೋರಾಟಗಾರ್ತಿ)

ರಾಜಕಾರಣಿಗಳು ಎಲ್ಲಿ?
ಘಟನೆ ನಡೆದ ಬಳಿಕ ಕಾವ್ಯಾಳ ಮನೆಗೆ ತೆರಳಿ ವಾಟ್ಸ್‌ಆ್ಯಪ್, ಫೇಸ್‌ಬುಕ್ ಸಹಿತ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕಿ ಪ್ರಚಾರ ಪಡೆಯುವ ರಾಜಕಾರಣಿಗಳು ಇಂದಿಲ್ಲಿ ಕಾಣೆಯಾಗಿದ್ದಾರೆ. ನಮಗೆ ಪರಿಹಾರ ಮುಖ್ಯ ಅಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಅದಕ್ಕಾಗಿ ವಿದ್ಯಾರ್ಥಿ ಶಕ್ತಿ ಒಂದಾಗಬೇಕು.

ಪ್ರತಿಭಾ ಕುಳಾಯಿ ಅಧ್ಯಕ್ಷೆ, ಮನಪಾ ಸ್ಥಾಯಿ ಸಮಿತಿ 

ಮೋಹನ್ ಆಳ್ವ ಕ್ಷಮೆಯಾಚಿಸಲಿ

ಪ್ರಕರಣಕ್ಕೆ ಸಂಬಂಧಿಸಿ ಮೋಹನ್ ಆಳ್ವ ಕ್ಷಮೆ ಯಾಚಿಸಲಿ. ಜೊತೆಗೆ ಕಾವ್ಯಾ ಪೂಜಾರಿ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಲಿ. ಸಿಬಿಐ ತನಿಖೆಗೆ ಸಹಕರಿಸಲಿ.

ಸೀತಾರಾಮ ಬೇರಿಂಜೆ, ಸಿಪಿಐ ಮುಖಂಡರು

share
ವಾರ್ತಾಭಾರತಿ
ವಾರ್ತಾಭಾರತಿ
Next Story
X