ಪೊರಕೆ ಹಿಡಿದು ರಸ್ತೆ ಗುಡಿಸಿದ ಶಾಸಕ ಶ್ರೀನಿವಾಸ್

ಚಿಕ್ಕಮಗಳೂರು, ಆ.9: ನಗರದ ಅಜಾದ್ ಪಾರ್ಕ್‌ನಲ್ಲಿ ಅಹ್ಮದ್ ಪಟೇಲ್ ರಾಜ್ಯ ಸಭೆಗೆ ಆಯ್ಕೆಯಾದ ಸಂಭ್ರ್ರಮವನ್ನು ಕಾಂಗ್ರ್ರೆಸ್ ಕಾರ್ಯಕರ್ತರು ಬುಧವಾರ ಪಟಾಕಿ ಸಿಡಿಸಿ ಆಚರಿಸಿದರು.
ಈ ಸಂದರ್ಭದಲ್ಲಿ ರಸ್ತೆ ಪಟಾಕಿಗಳ ತುಂಡುಗಳಿಂದಾಗಿ ಕಸದಿಂದ ತುಂಬಿಕೊಂಡಿತು. ಈ ಬಗ್ಗೆ ಎಚ್ಚರಗೊಂಡ ನಗರಸಭೆ ಸದಸ್ಯ ರೂಬೆನ್ ಮೊಸಸ್ ಪಕ್ಕದ ಗೂಡಂಗಡಿಯಿಂದ ಪೊರಕೆ ತಂದು ರಸ್ತೆ ಗುಡಿಸಲು ಆರಂಭಿಸಿದರು. ಆಗ ಅಲ್ಲ್ಲಿಯೇ ಇದ್ದ ಶಾಸಕ ಶ್ರೀನಿವಾಸ್ ತಾನೊಂದು ಪೊರಕೆ ಹಿಡಿದು ಕಸ ಗುಡಿಸಲು ಮುಂದಾದರು.
ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಡಾ.ವಿಜಯ್ ಕುಮಾರ್, ಎಂ.ಎಲ್.ಮೂರ್ತಿ ಕಸಗುಡಿಸಿದರು.
Next Story





