ಕ್ವಿಟ್ ಇಂಡಿಯಾ ನೆನಪಿಗೆ ಜಿಲ್ಲಾ ಕಾಂಗ್ರೆಸ್‌ನಿಂದ ಜಾಗೃತಿ ಜಾಥಾ

ತುಮಕೂರು. ಆ.9: ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದಲ್ಲಿ ಬುಧವಾರ ಕ್ವಿಟ್ ಇಂಡಿಯಾ ಚಳಿವಳಿಯ ನೆನಪಿಗಾಗಿ ಕ್ವಿಂಟ್ ಇಂಡಿಯಾ ದಿವಸ್ ಅಂಗವಾಗಿ ಬೃಹತ್ ಜಾಥಾ ಕೈಗೊಳ್ಳಲಾಗಿತ್ತು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳು, ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಅವರ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ಕಛೇರಿಯಿಂದ ಎಂ.ಜಿ..ರಸ್ತೆಯ ಮೂಲಕ ಟೌನ್‌ಹಾಲ್ ವರಗೆ ಜಾಥಾ ನಡೆಸಲಾಯಿತು.
ಟೌನ್‌ಹಾಲ್ ಬಳಿ ಸಮಾವೇಶಗೊಂಡ ಜಾಥವನ್ನು ಕುರಿತು ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ, ಕ್ವಿಟ್ ಇಂಡಿಯಾ ಚಳುವಳಿ 1942ರ ಸ್ವಾತಂತ್ರ್ಯ ಪೂರ್ವದಲ್ಲಿ ಕಾಂಗ್ರೆಸ್‌ನ ಘಟಾನುಘಟಿ ನಾಯಕರುಗಳು ಈ ಚಳುವಳಿ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಇವರಲ್ಲಿ ಕಾಂಗ್ರೆಸ್ ನಾಯಕರ ಪಾತ್ರ ಮಹತ್ವದ್ದು, ಅಂದು ಬ್ರಿಟಿಷರ ಆಡಳಿತದಲ್ಲಿ ಭಾರತೀಯರಾದ ನಾವುಗಳು ಬ್ರಿಟಿಷರ ಕೈಗೊಂಬೆ ಅಗಿದ್ದಂತಹ ಸಂದರ್ಭದಲ್ಲಿ ಮಹಾತ್ಮಗಾಂಧಿಜಿಯವರು ಅಂದೋಲನಗಳ ಮೂಲಕ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂಬ ಘೋಷಣೆಗಳ ಭಾರತೀಯರಲ್ಲಿ ಒಗ್ಗಟ್ಟು ಮೂಡಿಸಿ, ಸ್ವಾತಂತ್ರ ಆಂದೋಲನ ತೀವ್ರ ಸ್ವರೂಪ ಪಡೆದುಕೊಳ್ಳಲು ಕಾರಣರಾದರು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, 8ನೇ ಆಗಸ್ಟ್ 1942ರಂದು ಮಹಾತ್ಮಗಾಂಧಿಜಿಯವರು ಆಹಿಂಸ ಚಳುವಳಿಗಳ ಮುಖಾಂತರ ನಿರಂತರವಾಗಿ ಸ್ವಾತಂತ್ರಕ್ಕಾಗಿ ಪ್ರಯತ್ನ ಮಾಡಿದರು. ಬ್ರಿಟಿಷರ ಸಂಕೋಲೆಯಿಂದ ಭಾರತೀಯರನ್ನು ಬಿಡುಗಡೆಗೊಳಿಸಲು ಮಹಾತ್ಮಗಾಂಧಿಜಿಯವರ ಅಧ್ಯಕ್ಷತೆಯಲ್ಲಿ ಅನೇಕ ನಾಯಕರುಗಳು ಭಾಗವಹಿಸಿದ್ದರು.
ಲಕ್ಷ್ಷಾಂತರ ಜನರ ತ್ಯಾಗ ಬಲಿದಾನದಿಂದ ಬಂದ ಸ್ವಾತಂತ್ರ ಇಂದು ಕೋಮುವಾದಿಗಳ ಕೈಗೆ ದೇಶ ಹೋಗುತ್ತಿರುವುದು ವಿಷಾದನೀಯ, ರಾಜಕೀಯ ಕಾರ್ಯದರ್ಶಿ ಅಹಮ್ಮದ್ ಪಟೇಲ್‌ರವರನ್ನು ಸೋಲಿಸಲು ಕೋಮುವಾದಿ ನಾಯಕರುಗಳು ಮಾಡಿದ ಪ್ರಯತ್ನ ಫಲ ಕೊಡದೇ ಇಂದು ಕ್ವಿಟ್ ಇಂಡಿಯಾ ದಿವಸದ ದಿನ ಗುಜರಾತ್‌ನ ಜನರಿಗೆ ನಿಜವಾದ ಜಯ ದೊರೆತಿದೆ ಎಂದರು.
ಮಾಜಿ ಶಾಸಕ ಎಸ್.ಷಪಿ ಅಹಮದ್, ಕೆ.ಪಿ.ಸಿ.ಸಿ.ಉಸ್ತುವಾರಿ ಯೋಗೀಶ್ವರಿ, ರಾಜೇಶ್ ದೊಡ್ಡಮನೆ ಮತ್ತಿತರರು ಮಾತನಾಡಿದರು.
ಕೆ.ಪಿ.ಸಿ.ಸಿ. ಕಾರ್ಯದರ್ಶಿಗಳಾದ ಎಸ್.ಗೋಪಿನಾಥ, ಇರ್‌ದೀಶ್ ಖಾನ್, ಎಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು, ಜಿಲ್ಲಾ ಪಂಚಾಯಿತಿ ಸದಸ್ಯರುಗಳು, ಮಹಾನಗರ ಪಾಲಿಕೆ ಸದಸ್ಯರುಗಳು, ಮಹಿಳಾ ಕಾಂಗ್ರೆಸ್ ಅಧ್ಯಕ್ಷರು, ಎಸ್.ಸಿ. ಹಾಗೂ ಎಸ್.ಟಿ.ಘಟಕ,ಸೇವಾದಳ, ಯುವ ಕಾಂಗ್ರೆಸ್, ವಿದ್ಯಾರ್ಥಿ ಕಾಂಗ್ರೆಸ್ ಹಾಗೂ ಎಲ್ಲಾ ಮೂಂಚೂಣಿ ಘಟಕಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು ಭಾಗವಹಿಸಿದ್ದರು.







