ಹಾಸನ: ಆಗಸ್ಟ್ 9ರ ಮಧ್ಯರಾತ್ರಿಯಿಂದ ಆಗಸ್ಟ್ 11ರ ಬೆಳಿಗ್ಗೆ 6 ಗಂಟೆಯವರೆಗೆ ಮದ್ಯ ನಿಷೇಧ
ಹಾಸನ, ಆ. 9: ಆಗಸ್ಟ್ 10 ರಂದು ನಡೆಯುವ ಅರಸೀಕೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಚುನಾವಣೆ-2017 ರ ಸಂಬಂಧ ಚುನಾವಣೆ ದಿನದಂದು ಮತದಾನ ನಡೆಯುವ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮತ್ತು ಕಾನೂನು ಸುವ್ಯವಸ್ಥೆಗೆ ದಕ್ಕೆ ಉಂಟಾಗದಂತೆ ಹಾಗೂ ಚುನಾವಣೆಯು ಸುಗಮವಾಗಿ ನಡೆಸಲು ಮುನ್ನೇಚ್ಚರಿಕೆ ಕ್ರಮವಾಗಿ ಆಗಸ್ಟ್ 9 ರ ಮಧ್ಯರಾತ್ರಿಯಿಂದ ಆಗಸ್ಟ್ 11 ರ ಬೆಳಿಗ್ಗೆ 6 ಗಂಟೆಯವರೆಗೆ ಅರಸೀಕೆರೆ ತಾಲ್ಲೂಕಿನಾದ್ಯಂತ ಮದ್ಯ ಮಾರಾಟ ಮತ್ತು ಎಲ್ಲಾ ಬಗೆಯ ಬಾರುಗಳನ್ನು ಮುಚ್ಚುವುದು. ಎಲ್ಲಾ ಬಗೆಯ ಅಮಲು ಪಾನೀಯ ಹಾಗೂ ಮದ್ಯ ಶೇಖರಣೆ, ಮದ್ಯ ಮಾರಾಟ, ಮದ್ಯ ಸೇವೆ ಮಾಡುವಂತಹ ಎಲ್ಲಾ ಬಗೆಯ ಹೋಟೆಲ್‌ಗಳು, ಡಾಬಾಗಳು, ರೆಸ್ಟೋರೆಂಟ್ ಗಳಲ್ಲಿ ಮದ್ಯ ಮಾರಾಟ ಮಾಡುವುದನ್ನು ಹಾಗೂ ಮದ್ಯ ಸಾಗಾಟ ಮತ್ತು ಸರಬರಾಜು ಮಾಡುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ರೋಹಿಣಿ ಸಿಂಧೂರಿ ದಾಸರಿವರು ಆದೇಶಿಸಿದ್ದಾರೆ.
Next Story





