Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಸಚಿವರ ಹೆಸರಿನ ವಾಟ್ಸ್‌ಆ್ಯಪ್ ಗ್ರೂಪಿಗೆ ...

ಸಚಿವರ ಹೆಸರಿನ ವಾಟ್ಸ್‌ಆ್ಯಪ್ ಗ್ರೂಪಿಗೆ ಬ್ಲಾಕ್ ಅಧ್ಯಕ್ಷರಿಂದ ‘ಸೆಕ್ಸ್’ ವೀಡಿಯೊ ಸೈಟ್ ಕ್ಲಿಪ್ ರವಾನೆ!

ವಾರ್ತಾಭಾರತಿವಾರ್ತಾಭಾರತಿ9 Aug 2017 8:58 PM IST
share
ಸಚಿವರ ಹೆಸರಿನ ವಾಟ್ಸ್‌ಆ್ಯಪ್ ಗ್ರೂಪಿಗೆ  ಬ್ಲಾಕ್ ಅಧ್ಯಕ್ಷರಿಂದ ‘ಸೆಕ್ಸ್’ ವೀಡಿಯೊ ಸೈಟ್ ಕ್ಲಿಪ್ ರವಾನೆ!

ಪುತ್ತೂರು, ಆ.9: ವಾಟ್ಸ್‌ಆ್ಯಪ್‌ಗೆ ಹರಿದು ಬಂದಿದ್ದ ‘ರಿಯಲ್ ಸೆಕ್ಸ್’ ಎಚ್‌ಟಿಟಿಪಿ ಪ್ರಿಯಾ ವೀಡಿಯೊಸ್ ಡಾಟ್ ಇನ್ ಎನ್ನುವ ವೀಡಿಯೊ ಸೈಟ್ ಗೇಂ ಕ್ಲಿಪ್ ಅನ್ನು ಆಕರ್ಷಕ ಬಹುಮಾನ ಪಡೆಯುವ ಉದ್ದೇಶದಿಂದ ಜಿಲ್ಲಾ ಉಸ್ತುವಾರಿ ಸಚಿವ ‘ಶ್ರೀ ರಮಾನಾಥ ರೈ ಗೆಳೆಯರ ಬಳಗ’ ಮತ್ತು ಬ್ಲಾಕ್ ಕಾಂಗ್ರೆಸ್ ಗ್ರೂಪ್‌ಗಳ ಸಹಿತ 5 ವಾಟ್ಸ್‌ಆ್ಯಪ್ ಗ್ರೂಪ್‌ಗಳಿಗೆ ರವಾನೆ ಮಾಡಿದ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಅಚಾತುರ್ಯ ಇದೀಗ ಅವರ ಮಾನಹರಣಕ್ಕೆ ಕಾರಣವಾಗಿದೆ. ಮಾತ್ರವಲ್ಲದೆ ಪಕ್ಷದೊಳಗೆ ಟೀಕೆಗೆ ಗುರಿಯಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಶಾಸಕಿ ಶಕುಂತಳಾ ಶೆಟ್ಟಿ, ಜಿಪಂ, ತಾಪಂ, ನಗರಸಭೆಯ ಜನಪ್ರತಿನಿಧಿಗಳು ಸೇರಿದಂತೆ ಹಲವಾರು ಮಂದಿ ಗಣ್ಯ ವ್ಯಕ್ತಿಗಳಿಗಿರುವ ವಾಟ್ಸ್‌ಆ್ಯಪ್ ಗ್ರೂಪ್‌ಗಳಿಗೆ ಈ ವೀಡಿಯೊ ಕ್ಲಿಪ್ ಹರಿದು ಬಂದ ಬೆನ್ನಲ್ಲೇ ಹಲವರಿಂದ ಇದಕ್ಕೆ ನಿಂದನೆಯ ಪ್ರತಿಕ್ರಿಯೆ ಹಾಗೂ ತಿಳುವಳಿಕೆಯ ಸಲಹೆ ವ್ಯಕ್ತವಾಗಿದೆ.

ಫಝಲ್ ರಹೀಂ ಅವರ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಬಂದಿದ್ದ ‘ರಿಯಲ್ ಸೆಕ್ಸ್’ ಎಚ್‌ಟಿಟಿಪಿ ಪ್ರಿಯಾ ವೀಡಿಯೊಸ್ ಡಾಟ್ ಇನ್ ಎನ್ನುವ ವೀಡಿಯೊ ಸೈಟ್ ಕ್ಲಿಪ್ ಅನ್ನು ಕ್ಲಿಕ್ ಮಾಡಿದ ಸಂದರ್ಭ ‘ಲಕ್ಕಿ ವೀಲ್ ಸ್ಪಿನ್ ಮಾಡಿ ಆಕರ್ಷಕ ಬಹುಮಾನಗಳನ್ನು ಪಡೆಯಿರಿ’ ಎಂಬ ಸಂದೇಶ ಬಂದಿದ್ದ ಹಿನ್ನೆಲೆಯಲ್ಲಿ ಅವರು ಬಹುಮಾನ ಪಡೆಯುವ ಆಸೆಯಿಂದ ಲಕ್ಕಿ ವೀಲ್ ಸ್ಪಿನ್ ಮಾಡಿ, ಅದರಲ್ಲಿದ್ದ ಮಾಹಿತಿಯಂತೆ 5 ವಾಟ್ಸ್‌ಆ್ಯಪ್ ಗ್ರೂಪ್‌ಗಳಿಗೆ ಈ ಕ್ಲಿಪ್‌ನ್ನು ರವಾನಿಸಿದ್ದರೆನ್ನಲಾಗಿದೆ. ಈ ಆಚಾತುರ್ಯದಿಂದಾಗಿ ಇದೀಗ ಅವರು ಟೀಕೆ ಎದುರಿಸಬೇಕಾಗಿ ಬಂದಿದೆ.

ಯಾರೇ ಮಾಡಿದರೂ ತಪ್ಪು: ಶಕುಂತಳಾ ಶೆಟ್ಟಿ

ಯಾರೇ ಆಗಲಿ, ಸಾಮಾಜಿಕ ಜಾಲ ತಾಣಗಳಲ್ಲಿ ಬ್ಲೂ ಫಿಲಂನಂತಹ ಅನೈತಿಕ, ಅಶ್ಲೀಲ ವೀಡಿಯೊಗಳನ್ನು ಮತ್ತು ಇನ್ನೊಬ್ಬರಿಗೆ ನೋವಾಗುವ ವಿಚಾರಗಳನ್ನು ರವಾನಿಸಿದರೆ ಶಾಸಕಿಯಾಗಿ ಮಾತ್ರವಲ್ಲ ಒಬ್ಬ ಸಾಮಾನ್ಯ ವ್ಯಕ್ತಿಯಾಗಿಯೂ ತಾನು ವಿರೋಧಿಸುತ್ತೇನೆ. ಅಂತಹ ಕೆಲಸ ಯಾರೇ ಮಾಡಿದ್ದರೂ ತಪ್ಪು. ನಾಯಕರಾಗಿದ್ದರೂ ತಪ್ಪು ಅದರಲ್ಲಿ ಎರಡು ಮಾತಿಲ್ಲ ಎಂದು ಶಾಸಕಿ ಶಕುಂತಳಾ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.

ಎಲ್ಲಾ ವಾಟ್ಸ್‌ಆ್ಯಪ್ ಗ್ರೂಪ್‌ಗಳಿಂದ ಬಂದ ಸಂದೇಶ, ವೀಡಿಯೊಗಳನ್ನು ತಾನು ಅಳಿಸಿ ಹಾಕಿರುವ ಕಾರಣ ತಾನು ಈ ಕ್ಲಿಪ್ ನೋಡಿಲ್ಲ. ಮಾಧ್ಯಮ ಮಂದಿಯಿಂದ ಈಗ ತಾನೇ ಈ ವಿಚಾರ ತಿಳಿದು ಬಂದಿದ್ದು, ಈ ಅಶ್ಲೀಲ ವೀಡಿಯೊ ಸೈಟ್ ಕ್ಲಿಪ್ ರವಾನಿಸಿದವರು ಒಳ್ಳೆಯ ವ್ಯಕ್ತಿಗಳಾಗಿದ್ದಲ್ಲಿ ಅವರು ತಮ್ಮ ಯೋಗ್ಯತೆಯ ಬಗ್ಗೆ ಆಲೋಚನೆ ಮಾಡಬೇಕು ಎಂದಿರುವ ಅವರು, ವಿಧಾನಸಭೆಯಲ್ಲಿ ಬ್ಲೂ ಫಿಲಂ ನೋಡಿ ಸದನಕ್ಕೆ ಅವಮಾನವಾಗಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಹೀಗಿರುವಾಗ ಸಾರ್ವಜನಿಕ ರಂಗದಲ್ಲಿರುವ ತಮಗೆ ಬಂದ ಇಂತಹ ವೀಡಿಯೊ ಸೈಟ್ ಕ್ಲಿಪ್‌ನ್ನು ಇನ್ನೊಬ್ಬರಿಗೆ ರವಾನಿಸುತ್ತಾರೆ ಎಂದಾದರೆ ಅವರೂ ಸರಿಯಿಲ್ಲ ಎಂದೇ ಅರ್ಥ ಎಂದು ಶಾಸಕಿ ತಿಳಿಸಿದ್ದಾರೆ.

ಈ ಕೆಲಸವನ್ನು ಯಾರು ಮಾಡಿದ್ದಾರೆ ಎಂಬುವುದು ತನಗೆ ತಿಳಿದಿಲ್ಲ. ಈ ಬಗ್ಗೆ ತಿಳಿದುಕೊಂಡು ವಿಷಯವನ್ನು ಪಕ್ಷದ ವರಿಷ್ಠ ನಾಯಕರ ಗಮನಕ್ಕೆ ತರುತ್ತೇನೆ. ಕ್ರಮಕೈಗೊಳ್ಳುವುದು ಪಕ್ಷಕ್ಕೆ ಬಿಟ್ಟ ವಿಚಾರ ಎಂದು ಅವರು ತಿಳಿಸಿದ್ದಾರೆ.

ನಾನು ಕಳುಹಿಸಿದ್ದೇ ಬೇರೆ, ಆಗಿದ್ದೇ ಬೇರೆ: ಫಝಲ್ ರಹೀಂ

ತನ್ನ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಬಂದಿದ್ದ ವೀಡಿಯೊ ಸೈಟ್ ಕ್ಲಿಪ್ ಒಂದನ್ನು ಟಚ್ ಮಾಡಿ ನೋಡಿದಾಗ ಅದರಲ್ಲಿ ಯಾವುದೇ ಅಶ್ಲೀಲತೆ ಇರಲಿಲ್ಲ. ಬದಲಾಗಿ ಲಕ್ಕಿ ಚಕ್ರ ಕಂಡು ಬಂದಿತ್ತು. ಅದನ್ನು ತಿರುಗಿಸಿ ಆಕರ್ಷಕ ಬಹುಮಾನ ಪಡೆಯುವಂತೆ ಮೆಸೇಜ್ ಇತ್ತು. ಲಕ್ಕಿ ಚಕ್ರ ತಿರುಗಿಸಿದಾಗ 5 ಮಂದಿಗೆ ಶೇರ್ ಮಾಡಿ ಬಹುಮಾನ ಪಡೆಯುವಂತೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಅದನ್ನು 5 ಗ್ರೂಪ್‌ಗಳಿಗೆ ಶೇರ್ ಮಾಡಿದ್ದೇನೆಯೇ ಹೊರತು ಇದರಲ್ಲಿ ಕೆಟ್ಟ ಉದ್ದೇಶ ಇರಲಿಲ್ಲ. ಹೀಗಾಗುತ್ತದೆ ಎಂಬ ವಿಚಾರವೂ ತಿಳಿದಿರಲಿಲ್ಲ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಝಲ್ ರಹೀಂ ಪ್ರತಿಕ್ರಿಯೆ ನೀಡಿದ್ದಾರೆ.

ಗ್ರೂಪ್‌ಗೆ ರವಾನಿಸಿದ ಈ ವೀಡಿಯೊ ಸೈಟ್ ಕ್ಲಿಪ್ ಅಶ್ಲೀಲತೆಯಿಂದ ಕೂಡಿರುವ ವಿಚಾರ ಪ್ರತಿಕ್ರಿಯೆಗಳು ಬಂದ ಬಳಿಕವಷ್ಟೇ ತನ್ನ ಗಮನಕ್ಕೆ ಬಂದಿದೆ. ತಿಳಿಯದೆ ಮಾಡಿದ ಪ್ರಮಾದದಿಂದಾಗಿ ಈ ರೀತಿ ಆಗಿದೆ ಎಂದು ಅವರು ತಿಳಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X