ಗೋವಾದ 95 ಶೇ. ಆರೆಸ್ಸೆಸ್ ಕಾರ್ಯಕರ್ತರು ಬಿಜೆಪಿಗೆ ವಿರುದ್ಧವಾಗಿದ್ದಾರೆ: ಆರೆಸ್ಸೆಸ್ ನ ಮಾಜಿ ನಾಯಕ

ಗೋವಾ, ಆ.9: ರಾಜ್ಯದಲ್ಲಿರುವ 95 ಶೇ.ದಷ್ಟು ಆರೆಸ್ಸೆಸ್ ಕಾರ್ಯಕರ್ತರು ಬಿಜೆಪಿಯ ವಿರುದ್ಧವಾಗಿದ್ದಾರೆ ಹಾಗೂ ಗೋವಾ ಸುರಕ್ಷಾ ಮಂಚ್ ನ ಬೆಂಬಲಿಗರಾಗಿದ್ದಾರೆ ಎಂದು ಆರೆಸ್ಸೆಸ್ ನ ಮಾಜಿ ನಾಯಕ ಸುಭಾಷ್ ವೆಲ್ಲಿಂಗ್ಕರ್ ಹೇಳಿದ್ದಾರೆ.
ಬಿಜೆಪಿ ಸರಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸುಭಾಷ್ , ರಾಜ್ಯದಲ್ಲಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಪ್ರೋತ್ಸಾಹ ನೀಡಿರುವ ಬಿಜೆಪಿ ಕೊಂಕಣಿ ಹಾಗೂ ಮರಾಠಿಯಂತಹ ಸ್ಥಳೀಯ ಭಾಷೆಗಳನ್ನು ಕಡೆಗಣಿಸಿದೆ ಎಂದಿದ್ದಾರೆ.
ಆಗಸ್ಟ್ 23ರಂದು ನಡೆಯಲಿರುವ ಪಣಜಿ ಉಪಚುನಾವಣೆಗೆ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ವಿರುದ್ಧ ಗೋವಾ ಸುರಕ್ಷಾ ಮಂಚ್ ನ ಅಧ್ಯಕ್ಷ ಆನಂದ್ ಶಿರೋಡ್ಕರ್ ಸ್ಪರ್ಧಿಸಲಿದ್ದಾರೆ.
Next Story





