ಅಂತರ್ ಜಿಲ್ಲಾ ದರೋಡೆಕೋರರ ಬಂಧನ
68ಸಾವಿರ ರೂ. ಮೌಲ್ಯದ ವಸ್ತು ವಶ

ದಾವಣಗೆರೆ, ಆ.9: ಡೈಮಂಡ್ ವ್ಯಾಪಾರಿ ಸೋಗಿನಲ್ಲಿ ಬೆಲೆ ಬಾಳುವ ಆಭರಣ ಇದೆ ಎಂದು ನಂಬಿಸಿ ಗ್ರಾಹಕರನ್ನು ಮೋಸ ಮಾಡಿದ ದುನಿಯಾ ವಿಜಿ ಅಭಿಮಾನಿ ಬಳಗದ ರಾಜ್ಯಾಧ್ಯಕ್ಷ ಎಚ್.ಎಸ್.ದೊಡ್ಡೇಶ್, ಬೆಳ್ಳಿ ಬೆಟ್ಟ ಚಿತ್ರದ ನಿರ್ಮಾಪಕ, ಉತ್ತೇಶ್ ಗುರುರಾಜ್ ಬಂಧನ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ್ ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ತಬರೇಜ್ ಎ ಶೇಕ್ ವಂಚನೆಗೊಳಾದ ವ್ಯಕ್ತಿ. ಅಲ್ಲದೇ ಮನಬಂದಂತೆ ಹಿಂಸೆ ಕೊಟ್ಟು ಆಸ್ತಿ ವಿವರ, ಬ್ಯಾಂಕ್ ಬ್ಯಾಲೆನ್ಸ್ ಪಡೆದು, ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಕಾರು ಮತ್ತು 2 ಲಕ್ಷ ರೂ.ಗಳನ್ನು ಕಿತ್ತುಕೊಂಡು ಅವರನ್ನು ದಾವಣಗೆರೆಗೆ ಕರೆತಂದು ಬಸ್ಸಿನಲ್ಲಿ ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದರು. ಶ್ರೀಮಂತರನ್ನ ಗುರಿಯಾಗಿಸಿ ದಂಧೆ ಮಾಡುತ್ತಿದ್ದರು. ಇವರಿಂದ 36 ಸಾವಿರ ನಗದು, 1 ಫೋರ್ಡ್, 1 ಬೆನ್ಜ್ ಕಾರು, 3 ಮೊಬೈಲ್ ವಶ ಪಡಿಸಿಕೊಳ್ಳಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಈ ಸಂಬಂಧ ತಬರೇಜ್ ಎ ಷೇಕ್ ಆಗಸ್ಟ್ 8 ರಂದು ಹೊನ್ನಾಳಿ ಪೊಲೀಸರಿಗೆ ದೂರು ನೀಡಿದ ಮೇರೆಗೆ ದೊಡ್ಡೇಶ್, ಹುತ್ತೇಶ್ ಮತ್ತು ಗುರುರಾಜ್ ಅವರನ್ನು ಬಂಧಿಸಲಾಗಿದ್ದು, ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಇನ್ನೂ ಇಬ್ಬರ ಪತ್ತೆಗೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಪ್ರಕರಣ ಪತ್ತೆ ಹಚ್ಚಿದ ಸಿಬ್ಬಂದಿಗಳಿಗೆ 10 ಸಾವಿರ ರೂ. ನಗದು ಬಹುಮಾನ ಘೋಷಿಸಲಾಗಿದೆ ಎಂದರು.





