ಮನೆಗೆ ಕಲ್ಲೆಸೆದು ಹಾನಿ: ದೂರು
ಬ್ರಹ್ಮಾವರ, ಆ.9: ಉಪ್ಪಿನಕೋಟೆಯಲ್ಲಿ ಮನೆಯೊಂದರ ಕಿಟಕಿಗೆ ದುಷ್ಕರ್ಮಿಗಳು ಕಲ್ಲೆಸೆದು ಹಾನಿ ಎಸಗಿರುವ ಘಟನೆ ನಡೆದಿದೆ.
ಕುರ್ಶಿದ್ ಬಾನು ಎಂಬವರ ಮನೆಗೆ ದುಷ್ಕರ್ಮಿಗಳು ತೊಂದರೆ ಉಂಟು ಮಾಡುವ ದುರುದ್ದೇಶದಿಂದ ಇಟ್ಟಿಗೆಯ ತುಂಡನ್ನು ಎಸೆದು ಕಿಟಕಿಯ ಗಾಜು ಹೊಡೆದು ಪರಾರಿಯಾಗಿದ್ದಾರೆ. ಇದರಿಂದ ಮನೆಯ ಕಿಟಕಿಯ ಗ್ಲಾಸು ಪುಡಿಯಾಗಿ 2,000ರೂ. ನಷ್ಟ ಉಂಟಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





