ಪ್ಯಾರಿಸ್: ಸೈನಿಕರ ಮೇಲೆ ಹರಿದ ಕಾರು 6 ಮಂದಿಗೆ ಗಾಯ

ಪ್ಯಾರಿಸ್, ಆ. 9: ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನ ಉಪನಗರವೊಂದರಲ್ಲಿ ರಸ್ತೆ ಬದಿಯಲ್ಲಿ ನಿಂತಿದ್ದ ಸೈನಿಕರ ಗುಂಪೊಂದರ ಮೇಲೆ ಕಾರೊಂದು ಹರಿದು ಪರಾರಿಯಾಗಿದೆ. ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ.
ರಸ್ತೆಯ ಬದಿಯಲ್ಲಿ ನಿಂತಿದ್ದ ಬಿಎಂಡಬ್ಲು ಕಾರೊಂದು, ಸೈನಿಕರು ಗಸ್ತು ತಿರುಗುವುದಕ್ಕಾಗಿ ತಮ್ಮ ಬರಾಕ್‌ಗಳಿಂದ ಹೊರಬರುತ್ತಿದ್ದ ವೇಳೆ ವೇಗ ಹೆಚ್ಚಿಸಿಕೊಂಡು ಸೈನಿಕರ ಮೇಲೆ ಹರಿಯಿತು ಎಂದು ಪ್ಯಾರಿಸ್ ಮೇಯರ್ ಪ್ಯಾಟ್ರಿಕ್ ಬ್ಯಾಲ್ಕನಿ ಹೇಳಿದರು.
ಗಾಯಗೊಂಡ ಆರು ಮಂದಿಯ ಪೈಕಿ ಇಬ್ಬರ ಪರಿಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ಹೇಳಿದರು. ಈ ಕೃತ್ಯವು ಪೂರ್ವಯೋಜಿತ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಬ್ಯಾಲ್ಕನಿ ನುಡಿದರು. ಪ್ಯಾರಿಸ್ ಪ್ರಾಸಿಕ್ಯೂಟರ್ ಕಚೇರಿಯ ಭಯೋತ್ಪಾದನೆ ನಿಗ್ರಹ ಘಟಕ ಘಟನೆಯ ಬಗ್ಗೆ ತನಿಖೆ ಆರಂಭಿಸಿದೆ.
ಕಳೆದ ಎರಡು ವರ್ಷಗಳ ಅವಧಿಯಲ್ಲಿ ಫ್ರಾನ್ಸ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗಳಲ್ಲಿ 230ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ, ದೇಶ ಕಟ್ಟೆಚ್ಚರದಲ್ಲಿದೆ.
Next Story





