ದನ ಕದ್ದು ಮಾಂಸ ಮಾಡಿದ ಪ್ರಕರಣ: ನಾಲ್ವರು ಆರೋಪಿಗಳ ಸೆರೆ
ಬೆಳ್ತಂಗಡಿ, ಆ. 9: ಅರಸಿನಮಕ್ಕಿ ಗ್ರಾಮದ ಕಾಪಿನಡ್ಕ ಎಂಬಲ್ಲಿ ಗುಡ್ಡದಲ್ಲಿ ಕಟ್ಟಿ ಹಾಕಿದ್ದ ದನವನ್ನು ಕದ್ದೊಯ್ದು ಮಾಂಸ ಮಾಡಿದ ಪ್ರಕರಣದ ನಾಲ್ವರು ಆರೋಪಿಗಳನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.
ಲಭ್ಯ ಮಾಹಿತಿಯ ಪ್ರಕಾರ ಸ್ಥಳೀಯ ನಿವಾಸಿಗಳಾದ ಸಂತೋಷ, ಬಿನೀಶ್, ಬಿನೋಜ್ ಹಾಗೂ ರಾಜಪ್ಪ ಎಂಬವರು ಪೊಲೀಸ್ ವಶದಲ್ಲಿರುವ ಆರೋಪಿಗಳು ಎಂದು ಗುರುತಿಸಲಾಗಿದೆ.
ಆನಂದ ಗೌಡ ಎಂಬವರು ಮನೆ ಸಮೀಪದ ಗುಡ್ಡದಲ್ಲಿ ಕಟ್ಟಿ ಹಾಕಿದ್ದ ದನವನ್ನು ಅವರು ಕಳ್ಳತನ ಮಾಡಿ ಹತ್ಯೆ ಮಾಡಿದ್ದರು ಎನ್ನಲಾಗಿದ್ದು, ಆನಂದ ಗೌಡ ನೀಡಿರುವ ದೂರಿನಂತೆ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ.
Next Story





