ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಯೆನೆಪೋಯಾ ಸ್ಕೂಲ್ ವಿದ್ಯಾರ್ಥಿಗಳು

ಮಂಗಳೂರು, ಆ. 9: ಮುಂಬರುವ ಐಐಎಂಯುಎನ್ (ಇಂಡಿಯನ್ ಇಂಟರ್ನ್ಯಾಷನಲ್ ಮಾಡೆಲ್ ಯುನೈಟೆಡ್ ನೇಷನ್ಸ್) ಯುಎಸ್‌ಎ 2017 ಸಮ್ಮೇಳನದಲ್ಲಿ ಭಾಗವಹಿಸಲು ಮಂಗಳೂರು ಯೆನೆಪೋಯಾ ಶಾಲೆಯ ಆರು ವಿದ್ಯಾರ್ಥಿಗಳ ತಂಡ ಆಯ್ಕೆಯಾಗಿದೆ.
10ನೆ ತರಗತಿಯ ಶೋಯಿಬ್ ಶಿಕ್ ಮುಹಮ್ಮದ್, ಅಂಜಲಿ ಮಾರಿಯಾ ಅಗಸ್ಟೀನ್, ಕ್ಯಾರೋಲಿನ್ ಕ್ಯಾಸ್ಟೆಲಿನೊ, 9ನೆ ತರಗತಿಯ ದ್ರೂವ್ ಕೆ. ಷಾ ಮತ್ತು 8ನೆ ತರಗತಿಯ ಇಲ್ಹಾನ್ ಇರ್ಫಾನ್, ವೈಷ್ಣವಿ ರಾವ್ ಸಮ್ಮೇಳನದಲ್ಲಿ ಭಾಗವಹಿಸುತ್ತಿರುವ ವಿದ್ಯಾರ್ಥಿಗಳು. ಅವರು ತಮ್ಮ ಶಿಕ್ಷಕಿ ಮತ್ತು ಮಾರ್ಗದರ್ಶಿಯಾದ ಮರ್ಸಿ ರೇಗೊ ಜೊತೆಯಲ್ಲಿರುತ್ತಾರೆ.
ಸಮ್ಮೇಳನದಲ್ಲಿ ಭಾರತದ ವಿವಿಧ ಭಾಗಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಆಗಸ್ಟ್ ನಲ್ಲಿ ನ್ಯೂಯಾರ್ಕ್ ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಇದನ್ನು ಆಯೋಜಿಸಲಾಗುವುದು. ಅಮೇರಿಕಾದಲ್ಲಿ ವಿದ್ಯಾರ್ಥಿಗಳು ಮೂರು ದಿನಗಳ ಮುನ್ ಸಭೆ ಮತ್ತು ನ್ಯೂಯಾರ್ಕ್, ವಾಷಿಂಗ್ಟನ್ ಡಿ.ಸಿ ಮತ್ತು ಒರ್ಲ್ಯಾಂಡೊಗಳಿಗೆ ಭೇಟಿ ನೀಡಲಿರುವ ಶೈಕ್ಷಣಿಕ ಪ್ರವಾಸವನ್ನು ಒಳಗೊಂಡಿದೆ.
ವಿದ್ಯಾರ್ಥಿಗಳು ವಿವಿಧ ಅಂತಾರಾಷ್ಟ್ರೀಯ ವ್ಯವಹಾರಗಳನ್ನು ಮತ್ತು ಸಮಸ್ಯೆಗಳನ್ನು ಚರ್ಚಿಸುತ್ತಾರೆ ಮತ್ತು ಹೊಸ ಪರಿಹಾರಗಳನ್ನು ಒದಗಿಸುತ್ತಾರೆ. ಇದು ಸಾಮಾಜಿಕ ಮತ್ತು ಆರ್ಥಿಕ ಪ್ರಾಮುಖ್ಯತೆಯ ವಿಷಯಗಳ ಬಗ್ಗೆ ಚರ್ಚಿಸಲು ಮತ್ತು ಪರಿಹಾರಕ್ಕಾಗಿ ತಲುಪಲು ಮಕ್ಕಳಿಗೆ ವೇದಿಕೆಯಾಗಿದೆ ಎಂದು ಸಂಸ್ಥೆ ತಿಳಿಸಿದೆ.







