Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ನೀಲಿ ಮಳೆಯಾಗಿ ಸುರಿದ ಅಂಬೇಡ್ಕರ್....

ನೀಲಿ ಮಳೆಯಾಗಿ ಸುರಿದ ಅಂಬೇಡ್ಕರ್....

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ10 Aug 2017 12:05 AM IST
share
ನೀಲಿ ಮಳೆಯಾಗಿ ಸುರಿದ ಅಂಬೇಡ್ಕರ್....

‘...ಭಾವಗೀತೆಯ ಸೆಲೆಯೇ ಬತ್ತಿದ ಕಾಲದಲ್ಲಿ ಅಂಬೇಡ್ಕರ್ ಕನ್ನಡ ಕವಿಗಳ ಎದೆಗಳಲ್ಲಿ ಭಾವ ಗೀತೆಯನ್ನುಕ್ಕಿಸುತ್ತಾರೆ, ಚರಿತ್ರೆಯನ್ನು ವಿಮರ್ಶಾತ್ಮಕವಾಗಿ ನೋಡಲೇಬೇಕಾದ ತುರ್ತನ್ನು ಕವಿಗಳೊಳಗೆ ಪ್ರಚೋದಿಸುತ್ತಾರೆ. ಕಳೆದ ನಲವತ್ತು ವರ್ಷಗಳಲ್ಲಿ ಕನ್ನಡ ಕಾವ್ಯ ಬಾಬಾ ಸಾಹೇಬರಿಗೆ ಸ್ಪಂದಿಸಿದಾಗ ಹುಟ್ಟಿದ ಇಲ್ಲಿನ ಅನೇಕ ಗ್ರಹಿಕೆಗಳು ಅನನ್ಯವಾಗಿವೆ...’’ ಎಂದು ‘ಅರಿವೇ ಅಂಬೇಡ್ಕರ್’ ಕೃತಿಯ ಕುರಿತಂತೆ ಖ್ಯಾತ ವಿಮರ್ಶಕ ನಟರಾಜ ಹುಳಿಯಾರ್ ಬರೆಯುತ್ತಾರೆ. ಹಂದಲಗೆರೆ ಗಿರೀಶ್ ಅವರು ಸಂಪಾದಿಸಿರುವ ಈ ಕೃತಿ, ಎರಡು ತಲೆಮಾರಿನ ಕವಿಗಳು ಅಂಬೇಡ್ಕರ್‌ನ್ನು ಗ್ರಹಿಸಿದ ರೀತಿಯನ್ನು ತೆರೆದಿಡುತ್ತದೆ. ಈ ದೇಶದಲ್ಲಿ ಕವಿಗಳ ಪಾಲಿಗೆ ಹಲವು ವ್ಯಕ್ತ್ತಿತ್ವಗಳು ವಸ್ತುವಾಗಿವೆ. ಅವುಗಳಲ್ಲಿ ಮುಖ್ಯವಾದುದು ಒಂದು ಬುದ್ಧ, ಇನ್ನೊಂದು ಗಾಂಧಿ, ಮಗದೊಂದು ಅಂಬೇಡ್ಕರ್. ಹಾಗೆಯೇ ಇನ್ನಷ್ಟು ನಾಯಕರನ್ನು ಕೇಂದ್ರವಾಗಿಟ್ಟು ಕವಿಗಳು ಕವಿತೆಗಳನ್ನು ಬರೆದಿದ್ದಾರಾದರೂ, ಅದು ತೀರಾ ವೈಯಕ್ತಿಕ ನೆಲೆಯಲ್ಲಾಗಿದೆ. ಬುದ್ಧ, ಗಾಂಧಿ, ಅಂಬೇಡ್ಕರ್ ಈ ದೇಶವನ್ನು ಬೇರೆ ಬೇರೆ ನೆಲೆಗಳಲ್ಲಿ ರೂಪಿಸಿದವರು. ಇವರ ಕುರಿತಂತೆ ಕವಿತೆಗಳನ್ನು ಬರೆಯುವುದೆಂದರೆ ವರ್ತ ಮಾನದ ಬೆಳವಣಿಗೆಗಳಿಗೆ ಕವಿ ನೀಡುವ ಪ್ರತಿಕ್ರಿಯೆಯೂ ಹೌದು. ಆದುದರಿಂದಲೇ ಅಂಬೇಡ್ಕರ್ ಕುರಿತಂತೆ ಬರೆದ ಕವಿತೆಗಳು ಕೇವಲ ವ್ಯಕ್ತಿ ಆರಾಧನೆಯಾಗಿ ಉಳಿಯದೆ, ಅದರಾಚೆಗಿನ ಸಾಮಾಜಿಕ, ರಾಜಕೀಯ ಪ್ರತಿಕ್ರಿಯೆಯಾಗಿ ಕಾಣಿಸಿಕೊಳ್ಳುತ್ತದೆ. ಈ ಕೃತಿಯಲ್ಲಿ ಸುಮಾರು 125 ಅಂಬೇಡ್ಕರ್ ಕುರಿತ ಕವಿತೆಗಳಿವೆ. ಚಂದ್ರಶೇಖರ ಕಂಬಾರ, ಎನ್. ಕೆ. ಹನುಮಂತಯ್ಯ, ಸಿದ್ದಲಿಂಗಯ್ಯ, ಗೋಪಾಲಕೃಷ್ಣ ಅಡಿಗ, ಕುಂ. ವೀರಭದ್ರಪ್ಪ, ಬಿ.ಟಿ. ಲಲಿತಾ ನಾಯಕ್, ಬೊಳುವಾರು ಮಹಮದ್ ಕುಂಞಿ, ಹಾರೋಹಳ್ಳಿ ರವೀಂದ್ರ, ಚಕ್ರವರ್ತಿ ಚಂದ್ರಚೂನ್... ಹೀಗೆ ಹಿರಿ-ಕಿರಿಯ ನೋಟದಲ್ಲಿ ಅಂಬೇಡ್ಕರ್ ಅವರ ಬದುಕನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಅಂಬೇಡ್ಕರ್ ಕುರಿತಂತೆ ಬರೆಯುವುದೆಂದರೆ ಈ ದೇಶದ ಜಾತಿ ವ್ಯವಸ್ಥೆ, ಅಸಮಾನತೆಯ ವಿರುದ್ಧ ಬರೆಯುವುದಾಗಿದೆ. ಇಲ್ಲಿರುವ ಹೆಚ್ಚಿನ ಕವಿಗಳು ನವೋದಯದ ಆಚೆಗಿನ ಬಂಡಾಯದ ಕಿಡಿಯನ್ನು ತನ್ನೊಳಗಿಟ್ಟುಕೊಂಡವರು.

‘ಹೂವಿನ ಹಾಗೆಯೆ ಬೇರಿಗು ಬೇರೆಯ

ನಿಜವಿದೆ ಎಂದವರು

ರಸಸಿದ್ದಿಯ ನಾಗಾರ್ಜುನ ಮರೆತಾ

ಬೇರನು ಕಂಡವರು...’ ಇದು ಅಂಬೇಡ್ಕರ್‌ರನ್ನು ಬಣ್ಣಿಸುವ ಕಂಬಾರರ ಪರಿಯಾದರೆ, ನವ್ಯದ ಪ್ರಕಾರದಲ್ಲಿ ಗೋಪಾಲ ಕೃಷ್ಣ ಅಡಿಗರು ‘‘...ನಿಮ್ಮನ್ನೆ ಕಲ್ಲಾಗಿ ಮಾಡಿ ವಿಗ್ರಹ ಕೆತ್ತಿ ಗುಡಿಕಟ್ಟಿ/ ಬುದ್ಧ ನನ್ನೆಂತೋ ಗಾಂಧಿ ಯನ್ನೆಂತೋ ಅಂತೆಯೇ/ ಒಳಗಿಟ್ಟು ಮುಗಿಸುತ್ತಾರೆ ಕತ್ತಲಲ್ಲಿ...’’ ಎಂದು ಆತಂಕ ಪಡುತ್ತಾರೆ. ಬಂಡಾಯದ ಕಾಲದಲ್ಲಿ ಚಂಪಾ ಅವರು ಬರೆದ ‘‘ತೊಳಲಾಡುವ ನೆರಳ ಬಸಿರೊಳಗಿಂದ/ ಬಲಭೀಮ ಅಂಬೆಗಾಲಿಟ್ಟು ಹೊರಬರುವಾಗ/ ಒಮ್ಮಾಮ್ಮೆ ಬೋಧಿವೃಕ್ಷಕ್ಕೆ ಬುದ್ಧನನ್ನು ನೇತಾಡಿಸಿದ/ ಈ ದೇಶದ ನೆನ್ನೆಗಳ ನೆನಪಾಗುತ್ತದೆ...’’ ಪಡುವ ಆತಂಕ ಅಡಿಗರಿಗಿಂತ ತುಸು ಭಿನ್ನವಾದುದು. ಕೆಲವು ತರುಣರ ಕವಿತೆಗಳು ಅಂಬೇಡ್ಕರ್ ಆರಾಧನೆಗೆ ಮೀಸಲಾಗಿದ್ದರೆ, ಹೆಚ್ಚಿನ ಕವಿತೆಗಳೂ ಸಾಮಾಜಿಕ ಜಾಗೃತಿಯ ಹಿನ್ನೆಲೆಯಲ್ಲಿ ರೂಪುಗೊಂಡವುಗಳು. ಇಲ್ಲಿರುವ ಕವಿತೆಗಳು ಅಂಬೇಡ್ಕರ್ ಅವರನ್ನು ಬಹುನೆಲೆಗಳಲ್ಲಿ ಶೋಧಿಸಿವೆ. ದಲಿತ ಪ್ರಜ್ಞೆ ಜಾಗೃತಗೊಂಡಿರುವ ಈ ದಿನಗಳಲ್ಲಿ ‘ಅರಿವೇ ಅಂಬೇಡ್ಕರ್’ ಸಂಕಲನ ಒಂದು ಒಳ್ಳೆಯ ಪ್ರಯತ್ನವಾಗಿದೆ. ಅವಿರತ ಪುಸ್ತಕ ಹೊರತಂದಿರುವ ಈ ಕೃತಿಯ ಮುಖಬೆಲೆ 200ರೂ. ಆಸಕ್ತರು 94499 35103 ದೂರವಾಣಿಯನ್ನು ಸಂಪರ್ಕಿಸಬಹುದು.

share
-ಕಾರುಣ್ಯಾ
-ಕಾರುಣ್ಯಾ
Next Story
X