ನನ್ನನ್ನು ಎಲ್ಲೆಲ್ಲೂ ಸಿಕ್ಕಿಸಬೇಡಿ: ಡಿ.ಕೆ.ಶಿವಕುಮಾರ್

ಬೆಂಗಳೂರು, ಆ. 10: ‘ಸದ್ಯಕ್ಕೆ ನನ್ನ ಪಾಡಿಗೆ ನಾನು ಇದ್ದೇನೆ. ನನ್ನನ್ನು ಹಾಗೆಯೇ ಇರಲು ಅವಕಾಶ ಕೊಡಿ, ಯಾವ್ಯಾವುದರಲ್ಲೂ ನನ್ನನ್ನು ಸಿಕ್ಕಿಸಬೇಡಿ’ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್, ಗುಜರಾತ್ ಚುನಾವಣಾ ಉಸ್ತುವಾರಿ ನಿಯೋಜನೆ ಸಂಬಂಧಿಸಿದ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಗುರುವಾರ ಇಲ್ಲಿನ ಸದಾಶಿವನಗರದಲ್ಲಿನ ತನ್ನ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಈ ಬಗ್ಗೆ ತಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಮಠಗಳು ರಾಜಕೀಯೇತರ ಸಂಸ್ಥೆಗಳು, ಅಲ್ಲಿಗೆ ಯಾವ ಪಕ್ಷದ ನಾಯಕರಾದರೂ ಭೇಟಿ ನೀಡಬಹುದು. ನಾನು ಕೂಡ ಸಿದ್ದಗಂಗಾ, ಸುತ್ತೂರು ಮಠ ಸೇರಿದಂತೆ ವಿವಿಧ ಮಠ-ಪೀಠಗಳಿಗೆ ಭೇಟಿ ನೀಡುತ್ತೇನೆ. ಹಾಗೆಂದು ಅದಕ್ಕೆ ರಾಜಕೀಯ ಬಣ್ಣ ಬಳಿಯುವುದು ಸರಿಯಲ್ಲ ಎಂದು ಅಮಿತ್ ಷಾ, ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡುವ ಸಂಬಂಧ ಪ್ರತಿಕ್ರಿಯೆ ನೀಡಿದರು.
Next Story





