ಡೋಕಾ ಲಾ ಸನಿಹದ ಗ್ರಾಮಸ್ಥರಿಗೆ ಗ್ರಾಮ ಬಿಟ್ಟು ತೆರಳಲು ಸೇನೆಯ ಆದೇಶ

ಹೊಸದಿಲ್ಲಿ, ಆ.10: ಭಾರತ-ಭೂತಾನ್-ಚೀನಾ ತ್ರಿರಾಷ್ಟ್ರ ಗಡಿಗಳು ಸಂಧಿಸುವ ಡೋಕಾ ಲಾದ ಸನಿಹದಲ್ಲಿರುವ ನಥಾಂಗ್ ಗ್ರಾಮಸ್ಥರಿಗೆ ಗ್ರಾಮ ಬಿಟ್ಟು ತೆರಳುವಂತೆ ಭಾರತೀಯ ಸೇನೆ ಆದೇಶಿಸಿದೆ.
ಡೋಕಾ ಲಾದಲ್ಲಿ ಭಾರತ-ಚೀನಾ ಪಡೆಗಳ ಮಧ್ಯೆ ಎರಡು ತಿಂಗಳಿನಿಂದ ಬಿಕ್ಕಟ್ಟಿನ ಪರಿಸ್ಥಿತಿ ತಲೆದೋರಿದ್ದು ನಥಾಂಗ್ ಗ್ರಾಮ ಈ ಸ್ಥಳಕ್ಕಿಂತ 35 ಕಿ.ಮೀ. ದೂರದಲ್ಲಿದೆ.
ಸುಕ್ನ ಪ್ರದೇಶದಿಂದ ಡೋಕಾ ಲಾದತ್ತ ಸಾಗುತ್ತಿರುವ 33 ಕಾರ್ಪ್ ವಿಭಾಗದ ಸಾವಿರಾರು ಯೋಧರಿಗೆ ವಾಸ್ತವ್ಯ ಒದಗಿಸುವ ದೃಷ್ಟಿಯಿಂದ ಈ ಆದೇಶ ನೀಡಲಾಗಿದೆಯೇ ಅಥವಾ ಒಂದು ವೇಳೆ ಕದನ ಏರ್ಪಟ್ಟರೆ ನಾಗರಿಕರಿಗೆ ತೊಂದರೆಯಾಗಬಾರದು ಎಂಬ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ.
Next Story





