ಕಸ್ತೂರಿ ರಂಗನ್ ವರದಿ ಗೊಂದಲ: ಕೇಂದ್ರ ಪರಿಸರ ಖಾತೆ ಸಚಿವರಿಗೆ ಮನವಿ

ಮಡಿಕೇರಿ, ಆ.10: ಡಾ.ಕಸ್ತೂರಿ ರಂಗನ್ ವರದಿ ಕುರಿತು ಕೊಡಗು ಸೇರಿದಂತೆ ಪಶ್ಚಿಮ ಘಟ್ಟ ಪ್ರದೇಶ ವ್ಯಾಪಿಯ ಜನರಲ್ಲಿ ಗೊಂದಲ ಸೃಷ್ಟಿಯಾಗಿದ್ದು, ಆತಂಕ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವರಾದ ಅನಂತ್ ಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿಬಿ.ಎಸ್.ಯಡಿಯೂರಪ್ಪಅವರ ನೇತೃತ್ವದಲ್ಲಿ ಸಂಸದರಾದ ಶೋಭಾ ಕರಂದ್ಲಾಜೆ, ನಳೀನ್ ಕುಮಾರ್ ಕಟೀಲು, ಪ್ರಹ್ಲಾದ್ ಜೋಶಿ, ಅನಂತ್ ಕುಮಾರ್ ಹೆಗಡೆ, ಶಾಸಕರಾದ ಕೆ.ಜಿ.ಬೋಪಯ್ಯ ಸಂಸದರಾದಪ್ರತಾಪ್ ಸಿಂಹ ರವರನ್ನೊಳಗೊಂಡ ನಿಯೋಗಇಂದು ಕೇಂದ್ರ ಪರಿಸರ ಖಾತೆ ಸಚಿವರಾದ ಡಾ. ಹರ್ಷವರ್ಧನ್ಅವರನ್ನು ಭೇಟಿಯಾಗಿ ಚರ್ಚಿಸಿತು.
ಡಾ.ಕಸ್ತೂರಿ ರಂಗನ್ ವರದಿಯ ಅನುಷ್ಠಾನದ ವಿಷಯದಲ್ಲಿ ಜನರಲ್ಲಿ ಉಂಟಾಗಿರುವ ಆತಂಕದ ನಿವಾರಣೆಯ ಬಗ್ಗೆ ಪ್ರಮುಖರು ಮನವಿ ಮಾಡಿದರು.
Next Story





