ಕಳ್ಳನ ಬಂಧನ: 450 ಗ್ರಾಂ ಚಿನ್ನಾಭರಣ ವಶ

ಮಂಡ್ಯ, ಆ.10: ಕಳ್ಳನೊಬ್ಬನನ್ನು ಬಂಧಿಸಿರುವ ಮಳವಳ್ಳಿ ತಾಲೂಕು ಹಲಗೂರು ಠಾಣೆ ಪೊಲೀಸರು ಆತನಿಂದ 12-60 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಮಳವಳ್ಳಿ ತಾಲೂಕು ಬೆಳಕವಾಡಿ ಗ್ರಾಮದ ವಾಸಿ ಆರಿಫ್ ಪಾಷ ಬಂಧಿತ ಕಳ್ಳನಾಗಿದ್ದು, ಈತನನ್ನು ನ್ಯಾಯಾಧೀಶರು ನ್ಯಾಯಾಂಗ ಬಂಧನದಲ್ಲಿಡಲು ಆದೇಶಿಸಿದ್ದಾರೆ.
ಎಎಸ್ಐ ಸಿದ್ದಶೆಟ್ಟಿ ಮತ್ತು ಸಿಬ್ಬಂದಿ ಹಲಗೂರಿನಲ್ಲಿ ರಾತ್ರಿ ಗಸ್ತಿನಲ್ಲಿದ್ದಾಗ ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ ಆರೀಫ್‌ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಪ್ರಕರಣ ಬಯಲಿಗೆ ಬಂದಿದೆ. ತುಮಕೂರಿನಲ್ಲಿ ಆಟೋ ಚಾಲಕನಾಗಿದ್ದ ಆರಿಫ್, ಗ್ರಾಮಕ್ಕೆ ಬಂದಾಗ ಮಳವಳ್ಳಿ ಮತ್ತು ಕೆ.ಎಂ.ದೊಡ್ಡಿಯಲ್ಲಿ ಹಗಲು ವೇಳೆ ಮನೆ ಬೀಗ ಹಾಕಿರುವುದನ್ನು ಗುರುತಿಸಿ ರಾತ್ರಿ ಮುರಿದು ಕಳವು ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಹಲಗೂರು ಗ್ರಾಮದಲ್ಲಿ 4, ಮಳವಳ್ಳಿ ಪಟ್ಟಣದಲ್ಲಿ ಹಾಗು ಕೆ.ಎಂ.ದೊಡ್ಡಿ ಠಾಣೆಯ ವ್ಯಾಪ್ತಿಯಲ್ಲಿ ತಲಾ 1 ಪ್ರಕರಣಗಳಲ್ಲಿ ಆರೋಪಿ ಭಾಗಿಯಾಗಿದ್ದಾನೆ ಎಂದು ಅವರು ಹೇಳಿದ್ದಾರೆ.
ಆರೋಪಿಯನ್ನು ಬಂಧಿಸುವಲ್ಲಿ ಪಾತ್ರವಹಿಸಿದ್ದ ಶ್ರೀಧರ್, ಕೆ.ಎಂ ದೊಡ್ಡಿ ಗೋವಿಂದಪ್ಪ, ಎಚ್.ಸಿ.ಮಹದೇವು, ಪ್ರೇಮ್ಕುಮಾರ್, ರಿಯಾಜ್ ಪಾಷ, ಪ್ರಭುಸ್ವಾಮಿ, ಜೈಕುಮಾರ್ , ನಾಗೇಶ್, ಮಂಜುನಾಥ್ ಅವರನ್ನು ಡಿವೈಎಸ್ಪಿ ಮಲ್ಲಿಕ್, ಸಿಪಿಐ ಶಿವಮಲ್ಲಯ್ಯ ಅಭಿನಂದಿಸಿದ್ದಾರೆ.





