ಕನ್ನಾರುಗುಡ್ಡೆ -ಬೆನಗಲ್ ರಸ್ತೆ ಉದ್ಘಾಟನೆ

ಉಡುಪಿ, ಆ.10: ಜಿಪಂ ಇಂಜಿನಿಯರಿಂಗ್ ವಿಭಾಗದ ವತಿಯಿಂದ 310 ಲಕ್ಷ ರೂ ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ 4.10 ಕಿಮೀ ಉದ್ದದ ಕನ್ನಾರುಗುಡ್ಡೆ- ಬೆನಗಲ್ ರಸ್ತೆಯನ್ನು ರಾಜ್ಯ ಮೀನುಗಾರಿಕೆ ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಗುರುವಾರ ಉದ್ಘಾಟಿಸಿದರು.
ಉಡುಪಿ ವಿಧಾನಸಭಾ ಕ್ಷೇತ್ರದಲ್ಲೇ ಅತ್ಯಂತ ಕಳಪೆಯಾಗಿದ್ದ ಈ ರಸ್ತೆಯನ್ನು, ಜಿಲ್ಲೆಯ ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಲ್ಲಿ ಉಳಿಕೆಯಾಗಿದ್ದ ಅನುದಾನವನ್ನು ಬಳಸಿಕೊಂಡು ಅತ್ಯಂತ ಸುಂದರ ರಸ್ತೆಯಾಗಿ ಅಭಿವದ್ಧಿ ಪಡಿಸಿದ್ದು, ಈ ರಸ್ತೆಯನ್ನು 5 ವರ್ಷಗಳ ವಾರ್ಷಿಕ ನಿರ್ವಹಣೆ ಮತ್ತು 6ನೇ ವರ್ಷ ಮರು ಡಾಂಬರೀಕರಣ ಮಾಡುವುದು ಸಂಬಂಧಪಟ್ಟ ಗುತ್ತಿಗೆದಾರರ ಹೊಣೆಯಾಗಿದೆ ಎಂದು ಸಚಿವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ಮೈರ್ಮಾಡಿ ಸುಧಾಕರ ಶೆಟ್ಟಿ, ತಾಪಂ ಸದಸ್ಯೆ ಗೋಪಿ ಕೆ.ನಾಯ್ಕೆ, ಜಿಪಂ ಇಂಜಿನಿಯರಿಂಗ್ ವಿಭಾಗದ ತ್ರಿಣೇಶ್ವರ್, ಕೆ.ಸಿ.ಸತೀಶ್, ವಿಜಯಾನಂದ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
Next Story





