ದೇಶದ ಪ್ರಪ್ರಥಮ ಕ್ರೀಡಾ ವಿ.ವಿ. ಮಸೂದೆ ಮಂಡನೆ

ಹೊಸದಿಲ್ಲಿ, ಆ. 10: ಭಾರತದ ಪ್ರಪ್ರಥಮ ಅಂತಾರಾಷ್ಟ್ರೀಯ ಗುಣಮಟ್ಟದ ಪರಿಪೂರ್ಣ ಕ್ರೀಡಾ ವಿಶ್ವವಿದ್ಯಾನಿಲಯ ಆರಂಭಿಸುವ ಮಸೂದೆಯನ್ನು ಲೋಕಸಭೆಯಲ್ಲಿ ಗುರುವಾರ ಮಂಡಿಸಲಾಯಿತು.
ಮಣಿಪುರದಲ್ಲಿ ವಿಶ್ವವಿದ್ಯಾನಿಲಯ ಆರಂಭಿಸಲು ಈ ರಾಷ್ಟ್ರೀಯ ವಿಶ್ವವಿದ್ಯಾನಿಲಯ ಮಸೂದೆ 2017 ನೆರವಾಗಲಿದೆ.
ಪ್ರಸ್ತುತ ಕೆಲವು ಸಂಸ್ಥೆಗಳು ಕ್ರೀಡಾಪಟು ಹಾಗೂ ತರಬೇತುದಾರರಿಗೆ ಕೆಲವು ಕೋರ್ಸ್‌ಗಳಿಗೆ ಅವಕಾಶ ನೀಡುತ್ತಿದೆ.
ದೇಶದ ಕ್ರೀಡಾ ವಿಜ್ಞಾನ, ಕ್ರೀಡಾ ತಂತ್ರಜ್ಞಾನ, ಅತ್ಯುನ್ನತ ಕಾರ್ಯನಿರ್ವಹಣೆಯ ತರಬೇತಿಯಂತಹ ಕ್ಷೇತ್ರಗಳ ನಡುವೆ ಕಂದರವಿದೆ. ಪ್ರಸ್ತಾವಿತ ವಿಶ್ವವಿದ್ಯಾನಿಲಯ ಈ ಕಂದರವನ್ನು ಜೋಡಿಸಲಿದೆ ಎಂದು ನಿರೀಕ್ಷಿಸಲಾಗಿದೆ.
ಕ್ರೀಡಾ ಸಚಿವ ವಿಜಯ್ ಗೋಯಲ್ ಬದಲಿಗೆ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಎಸ್.ಎಸ್. ಅಹ್ಲುವಾಲಿಯ ಈ ಮಸೂದೆ ಮಂಡಿಸಿದರು.
Next Story





