ಅನುದಾನ ರದ್ದು: ಆ.11ರಂದು ಪ್ರತಿಭಟನೆ
ಬಂಟ್ವಾಳ, ಆ. 10: ಕೊಲ್ಲೂರು ಮುಕಾಂಬಿಕದೇವಾಲಯದಿಂದ ದತ್ತು ಯೋಜನೆಯಡಿ ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರ ಮತ್ತು ಪುಣಚ ಶ್ರೀದೇವಿ ಶಾಲೆಗಳಿಗೆ ಕಳೆದ ಹತ್ತು ವರ್ಷಗಳಿಂದ ನೀಡಲಾಗುತ್ತಿದ್ದ ಅನುದಾನವನ್ನು ರದ್ದುಗೊಳಿಸಿ ಬಡ ಮಕ್ಕಳ ಅನ್ನಕ್ಕೆ ಕಲ್ಲು ಹಾಕಿದ ಸರಕಾರದ ಕ್ರಮದ ವಿರುದ್ಧ ಗರಂ ಆಗಿರುವ ವಿದ್ಯಾರ್ಥಿಗಳ ಪೋಷಕರು ಆ. 11ರಂದು ಬೆಳಿಗ್ಗೆ ಬಿ.ಸಿ.ರೋಡಿನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.
ಬಂಟ್ವಾಳ ತಾಲೂಕು ಕಚೇರಿ ಮುಂಭಾಗದಲ್ಲಿ ಅನುದಾನ ರದ್ದುಗೊಂಡ ಎರಡು ಶಾಲೆಗಳ ವಿದ್ಯಾರ್ಥಿಗಳು ಹಾಗೂ ಪೋಷಕರು ಸೇರಿ ಪ್ರತಿಭಟನೆ ನಡೆಸಲಿದ್ದೆವೆ ಎಂದು ಪೋಷಕರಾದ ಶೋಭಾ, ನಳಿನಿ, ಅಬ್ದುಲ್ ಹಕೀಂ ಅವರು ಗುರುವಾರ ಬಿ.ಸಿ.ರೋಡಿನ ಪ್ರಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ವಿದ್ಯಾರ್ಥಿಗಳಾದ ಅಖಿಲಾ, ಭವ್ಯಶ್ರೀ, ರಾಜೀವಿ, ನ್ಯಾಯವಾದಿ ಆಶಾ ಪ್ರಸಾದ್ ರೈ ಮೊದಲಾದವರಿದ್ದರು.
Next Story





