ಆಝಾದಿ ಕಾಲ್ನಡಿಗೆ ಜಾಥಾ
ಕುಂದಾಪುರ, ಆ.10: ‘ದೇಶ ಉಳಿಸಿ-ದ್ವೇಷ ಅಳಿಸಿ’ ಎಂಬ ಘೋಷಣೆ ಯೊಂದಿಗೆ ಕ್ವಿಟ್ ಇಂಡಿಯಾ ಚಳುವಳಿಯ ಸವಿ ನೆನಪಿಗಾಗಿ ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಆಝಾದಿ ಕಾಲ್ನಡಿಗೆ ಜಾಥಾ ಹಾಗೂ ಸಂದೇಶ ಭಾಷಣವು ಆ.11ರಂದು ಸಂಜೆ 4:30ಕ್ಕೆ ಕುಂದಾಪುರದಲ್ಲಿ ಜರಗಲಿದೆ.
ಕುಂದಾಪುರ ದರ್ಗಾದಿಂದ ಆರಂಭಗೊಂಡು ಜಾಥವು ಶಾಸ್ತ್ರಿ ಸರ್ಕಲ್ನಲ್ಲಿ ಸಮಾಪ್ತಿಗೊಳ್ಳಲಿದ್ದು, ಬಳಿಕ ಅಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಉದ್ಘಾಟಿಸಲಿದ್ದು, ಸಯ್ಯಿದ್ ಕೋಟೇಶ್ವರ ತಂಙಳ್ ದುವಾ ನೆರವೇರಿಸಲಿರುವರು.
ಉಡುಪಿ ಜಿಲ್ಲಾಧ್ಯಕ್ಷ ಅಶ್ರಫ್ ರಝಾ ಅಂಜದಿ ಅಧ್ಯಕ್ಷತೆ ವಹಿಸಲಿರುವರು. ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಹಾಫಿಳ್ ಮುಹಮ್ಮದ್ ಸುಫ್ಯಾನ್ ಸಖಾಫಿ ಸಂದೇಶ ಭಾಷಣ ಮಾಡಲಿರುವರು ಎಂದು ಪ್ರಕಟನೆಯಲ್ಲಿ ತಿಳಿಸಿದೆ.
Next Story





