‘ಪಾಕಿಸ್ತಾನದ ಮದರ್ ತೆರೆಸಾ’ ಡಾ.ರುತ್ ಫಾವು ನಿಧನ

ಪಾಕಿಸ್ತಾನ, ಆ.10: ಕುಷ್ಟರೋಗಿಗಳ ಪಾಲನೆಗೆ ತಮ್ಮ ಜೀವನ ಮುಡಿಪಾಗಿಟ್ಟ ಜರ್ಮನ್ ವೈದ್ಯೆ ‘ಪಾಕಿಸ್ತಾನದ ಮದರ್ ತೆರೆಸಾ’ ಎಂದೇ ಪ್ರಸಿದ್ಧರಾಗಿದ್ದ ಡಾ.ರುತ್ ಫಾವು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ತಮ್ಮ 87 ವಯಸ್ಸಿನಲ್ಲಿ ನಿಧನರಾದರು.
1960ರಲ್ಲಿ ಪಾಕಿಸ್ತಾನಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ್ದ ಫಾವು ಕುಷ್ಠರೋಗಿಗಳ ಅಸಹಾಯಕತೆಯನ್ನು ಕಂಡು ಅಲ್ಲೇ ನೆಲೆಸಲು ತೀರ್ಮಾನಿಸಿದರು. ಆ ಸಂದರ್ಭ ಅವರಿಗೆ 29 ವರ್ಷ ವಯಸ್ಸಾಗಿತ್ತು. ಅವರ ದೀರ್ಘ ಕಾಲಿಕ ಸೇವೆಯಿಂದ 1996ರಲ್ಲಿ ಪಾಕಿಸ್ತಾನ ಕುಷ್ಠರೋಗರಹಿತ ದೇಶವಾಯಿತು.
Next Story





