ನಿಟ್ಟೆಯಲ್ಲಿ ಕಾರ್ಯಾಗಾರ
ಮಂಗಳೂರು, ಉ. 10: ಕರ್ನಾಟಕ ಸ್ಟೇಟ್ ಕೌನ್ಸಿಲ್ ಫಾರ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಮತ್ತು ನಿಟ್ಟೆಯ ಎನ್‌ಎಂಎಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವತಿಯಿಂದ 40ನೆ ಕಾರ್ಯಾಗಾರ, ವಸ್ತುಪ್ರದರ್ಶನ ಮತ್ತು ಸ್ಟೂಡೆಂಟ್ ಪ್ರಾಜೆಕ್ಟ್ ಪ್ರೋಗ್ರಾಂ ಆ.11,12ರಂದು ನಿಟ್ಟೆ ಸಂಸ್ಥೆಯ ಸದಾನಂದ- ಓಪನ್ ಏರ್ ಆಡಿಟೋರಿಯಂನಲ್ಲಿ ನಡೆಯಲಿದೆ ಎಂದು ಪ್ರಾಂಶುಪಾಲ ಡಾ.ನಿರಂಜನ್ ಎಂ.ಚಿಪ್ಳೂನ್‌ಕರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸುರತ್ಕಲ್ ಎನ್‌ಐಟಿಕೆ ನಿರ್ದೇಶಕ ಪ್ರೊ.ಕರ್ಣಂ ಉಮಾ ಮಹೇಶ್ವರ ರಾವ್ ಕಾರ್ಯಾಗಾರ ಉದ್ಘಾಟಿಸಲಿದ್ದು, ನಿಟ್ಟೆ ಸಂಸ್ಥೆಗಳ ಅಧ್ಯಕ್ಷ ಎನ್.ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ.
ಅನಿಲ್ ಉಪ್ಪಿನ್, ಪ್ರೊ.ಬಸವರಾಜ್ ರಾಮ್‌ನಾಲ್, ಪ್ರೊ.ಸುಬ್ರಹ್ಮಣ್ಯಂ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ ಎಂದರು.
ಕೆಎಸ್‌ಸಿಎಸ್‌ಟಿಯ ವೈಜ್ಞಾನಿಕ ಅಧಿಕಾರಿ ಎಸ್.ಎನ್.ಸೊಂಡೂರ್, ಪ್ರಾಜೆಕ್ಟ್ ಎಂಜಿನಿಯರ್ ಕೆ.ಎನ್.ವೆಂಕಟೇಶ್, ಕಾರ್ಯಾಗಾರ ಸಂಯೋಜನಾ ಸಮಿತಿಯ ಅಧ್ಯಕ್ಷ ಡಾ.ರಾಧಾಕೃಷ್ಣ ಕೆ. ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.





