ನವೀಕರಿಸಬಹುದಾದ ಇಂಧನ ಮೂಲ: ಬಿವಿಟಿಯಲ್ಲಿ ತಿಂಗಳ ಸರ್ಟಿಫಿಕೇಟ್ ಕೋರ್ಸ್
ಮಣಿಪಾಲ, ಆ.10: ಶಿವಳ್ಳಿಯ ಭಾರತೀಯ ವಿಕಾಸ ಟ್ರಸ್ಟ್ ಹಾಗೂ ಬೆಂಗಳೂರಿನ ಸೆಲ್ಕೋ ಪೌಂಡೇಶನ್, ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಹೊಸತಾಗಿ ಲಭ್ಯ ವಾಗುತ್ತಿರುವ ಉದ್ಯೋಗಾವಕಾಶ ಮತ್ತು ಸ್ವ ಉದ್ಯೋಗದ ಸಾಧ್ಯತೆಗಳನ್ನು ಮನಗಂಡು ಯುವ ಜನತೆಗೆ ಈ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿಗೆ ಪೂರಕವಾಗಿ ಒಂದು ತಿಂಗಳ ಸರ್ಟಿಫಿಕೇಟ್ ಕೋರ್ಸನ್ನು ಆಯೋಜಿಸಲು ಚಿಂತನೆ ನಡೆಸಿದೆ.
ಈ ಒಂದು ತಿಂಗಳ ತರಬೇತಿಯ ಅವಧಿಯಲ್ಲಿ ನವೀಕರಿಸಬಹುದಾದ ಇಂಧನ ಮೂಲಗಳ ತಾಂತ್ರಿಕತೆ, ಉಪಕರಣಗಳು,ರಿಪೇರಿ ಮತ್ತು ನಿರ್ವಹಣೆ, ಸ್ವ ಉದ್ಯೋಗ, ಉದ್ಯಮಶೀಲತೆ, ಬ್ಯಾಂಕಿಂಗ್ ಮತ್ತಿತರ ಪೂರಕ ವಿಚಾರಗಳ ಬಗ್ಗೆ 20 ದಿನ ಥಿಯರಿ ಕ್ಲಾಸುಗಳನ್ನೂ, ಉಳಿದ 10 ದಿನ ಪ್ರಾಯೋಗಿಕ ತರಗತಿಗಳನ್ನೂ ನಡೆಸಲಾಗುವುದು. ಸೋಲಾರ್ ಲೈಟಿಂಗ್, ವಯರಿಂಗ್ ಮತ್ತು ವಾಟರ್ ಹೀಟರ್‌ಗಳ ಇನ್ಟಲೇಶನ್, ಬಯೋಗ್ಯಾಸ್ ಬಗ್ಗೆ ಫೀಲ್ಡ್ ತರಬೇತಿಯನ್ನೂ ನೀಡಲಾಗುವುದು.
ಈ ತರಬೇತಿಯನ್ನು ಪಡೆಯುವ ಮೂಲಕ ಅ್ಯರ್ಥಿಗಳು ನವೀಕರಿಸ ಬಹುದಾದ ಇಂಧನ ಉಪಕರಣಗಳನ್ನು ಮಾರಾಟ ವಾಡುವ, ನಿರ್ವಹಿಸುವ ಕಂಪೆನಿಗಳಲ್ಲಿ ಉದ್ಯೋಗಾವಕಾಶ ಪಡೆಯಬಹುದು. ಜೊತೆಗೆ ಈ ಕ್ಷೇತ್ರದಲ್ಲಿ ಸ್ವಉದ್ಯೋಗವನ್ನೂ ಕೈಗೊಳ್ಳಬಹುದು. ಪಿಯುಸಿ/ಐಟಿಐ/ಡಿಪ್ಲೋಮ ಮುಗಿಸಿರುವ ಯುವಕ/ಯುವತಿಯರು ಅಲ್ಲದೇ ಇಲೆಕ್ಟ್ರಿಕಲ್ ವಯರಿಂಗ್, ಪ್ಲಂಬಿಂಗ್ ಕ್ಷೇತ್ರದಲ್ಲಿ ಕೌಶಲ್ಯ ಮತ್ತು ಅನುಭವ ಹೊಂದಿದವರೂ ಅರ್ಜಿ ಸಲ್ಲಿಸಬಹುದು.
ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಈ ಸರ್ಟಿಫಿಕೇಟ್ ಕೋರ್ಸನ್ನು ಮುಂದಿನ ಅಕ್ಟೋಬರ್/ನವಂಬರ್ ತಿಂಗಳಿನಲ್ಲಿ ಏರ್ಪಡಿಸಲಾಗುವುದು. 18ರಿಂದ 40 ಒಳಗಿನ ವಯೋಮಿತಿಯ ಆಸಕ್ತರು ಕೈಬರಹದ ಅರ್ಜಿಯಲ್ಲಿ ತಮ್ಮ ಹೆಸರು, ವಿಳಾಸ, ದೂರವಾಣಿ (ಮೊಬೈಲ್) ಸಂಖ್ಯೆ, ವಿದ್ಯಾರ್ಹತೆ ಇತ್ಯಾದಿ ವಿವರಗಳೊಂದಿಗೆ ಈ ಕೆಳಗಿನ ವಿಳಾಸ್ಕೆ ಆ.31ರೊಳಗೆ ಕಳುಹಿಸಬಹುದು.
. ವಿಳಾಸ: ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಭಾರತೀಯ ವಿಕಾಸ ಟ್ರಸ್ಟ್, ಅನಂತ, ಪೆರಂಪಳ್ಳಿ-ಅಂಬಾಗಿಲು ರಸ್ತೆ, ಕುಂಜಿಬೆಟ್ಟು ಪೋಸ್ಟ್, ಉಡುಪಿ- 576102, (ದೂರವಾಣಿ:0820-2570263) ಇವರಿಗೆ ಕಳುಹಿಸಿಕೊಡ ಬಹುದು ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.







