ತುಳು ಭಾಷೆ 8ನೆ ಪರಿಚ್ಛೇದಕ್ಕೆ ಸೇರ್ಪಡೆ ಆಗ್ರಹಿಸಿ ಟ್ವಿಟರ್ ಅಭಿಯಾನ
ಮಂಗಳೂರು, ಆ. 10: ತುಳು ಭಾಷೆ 8ನೆ ಪರಿಚ್ಛೇದಕ್ಕೆ ಸೇರ್ಪಡೆಯಾಗಬೇಕೆಂಬ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಹಕ್ಕೊತ್ತಾಯ ಮಂಡಿಸಲು ದೇಶ-ವಿದೇಶದಾದ್ಯಂತ ಗುರುವಾರ ನಡೆದ ಟ್ವಿಟರ್ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.
ಬೆಳಗ್ಗೆ 6 ಗಂಟೆಯಿಂದಲೇ ಆರಂಭವಾದ ಈ ಅಭಿಯಾನ ರಾತ್ರಿ 9 ಗಂಟೆ ತನಕವೂ ಮುಂದುವರಿದಿತ್ತು. ಈ ಅಭಿಯಾನದಲ್ಲಿ ಸಿನಿ ತಾರೆಯರು, ರಾಜಕೀಯ ಮುಖಂಡರು, ಕನ್ನಡ ಸೇರಿದಂತೆ ವಿವಿಧ ಭಾಷಾ ಸಂಘಟನೆಗಳ ಮುಖಂಡರು, ಯುವಸಮುದಾಯ, ಕಾಲೇಜು ವಿದ್ಯಾರ್ಥಿಗಳು, ಕಲಾವಿದರು ಸೇರಿದಂತೆ ಸಾವಿರಾರು ಮಂದಿ ಈ ಟ್ವಿಟರ್ ಅಭಿಯಾನದಲ್ಲಿ ಪಾಲ್ಗೊಂಡು ಸರಕಾರಕ್ಕೆ ಹಕ್ಕೊತ್ತಾಯ ಮಂಡಿಸಿದರು.
ಟ್ವೀಟ್ ಕೇವಲ 1 ಅವಧಿಯಲ್ಲಿ 3 ಸಾವಿರ ದಾಟಿತ್ತು. ಸಂಜೆ 6 ಗಂಟೆ ಹೊತ್ತಿಗೆ ಟ್ವೀಟ್ ಸಂಖ್ಯೆ 30 ಸಾವಿರ ದಾಟುವುದರೊಂದಿಗೆ ಅದ್ಭುತ ಪ್ರತಿಕ್ರಿಯೆ ಕಂಡು ಬಂತು. ಈ ಸಂಖ್ಯೆ ಸಂಜೆ 8 ಗಂಟೆಯ ವೇಳೆಗೆ ಟ್ವೀಟ್ ಸಂಖ್ಯೆ 37,200 ದಾಟಿತು ಎನ್ನುತ್ತಾರೆ ಜೈತುಳುನಾಡು ಅಧ್ಯಕ್ಷ ಅಶ್ವಥ್.
Next Story





