ಕೆಎಲ್‌ಎಫ್ ಸಂಪರ್ಕದ ಶಂಕೆ: ಮೂವರ ಬಂಧನ

ಭೋಪಾಲ, ಆ. 10: ನಿಷೇಧಿತ ಖಲಿಸ್ಥಾನ ಲಿಬರೇಶನ್ ಪಡೆಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಶಂಕಿಸಲಾದ ಮೂವರು ವ್ಯಕ್ತಿಗಳನ್ನು ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ ಬುಧವಾರ ರಾತ್ರಿ ಬಂಧಿಸಲಾಗಿದೆ.
ಪಂಜಾಬ್ ಪೊಲೀಸ್ ಹಾಗೂ ಮಧ್ಯಪ್ರದೇಶ ಭಯೋತ್ಪಾದನೆ ನಿಗ್ರಹ ದಳದ ಸಿಬ್ಬಂದಿ ನಡೆಸಿದ ಜಂಟಿ ಕಾರ್ಯಾಚರಣೆ ಸಂದರ್ಭ ಜಿಲ್ಲೆಯ ಮೂರು ಸ್ಥಳಗಳಿಂದ ಮೂವರನ್ನು ಬಂಧಿಸಲಾಗಿದೆ.
ಬಂಧಿತರನ್ನು ಬಾಲ್ಕರ್ ಸಿಂಗ್, ಬಲ್ವಿಂದರ್ ಸಿಂಗ್ ಹಾಗೂ ಸತೀಂದರ್ ಆಲಿಯಾಸ್ ಚೋಟು ರಾವತ್ ಎಂದು ಗುರುತಿಸಲಾಗಿದೆ. ಇವರನ್ನು ಕ್ರಮವಾಗಿ ಗ್ವಾಲಿಯರ್ ಜಿಲ್ಲೆಯ ಥಾಟಿಪುರ, ಚಿನೋರ್ ಹಾಗೂ ದಾಬ್ರಾ ಪ್ರದೇಶದಿಂದ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
Next Story





