ಮಿಂಚಿದ ರಾಣಾ-ರಾಯ್; ಭಾರತದ ಅಂಡರ್-19 ತಂಡಕ್ಕೆ ಜಯ

ಕ್ಯಾಂಟರ್ಬರಿ, ಆ.10: ಹಿಮಾಂಶು ರಾಯ್(74) ಬ್ಯಾಟಿಂಗ್ ಮತ್ತು ಅನುಕುಲ್ ಸುಧಾಕರ್ ರಾಯ್ (27ಕ್ಕೆ 4) ಶಿಸ್ತಿನ ದಾಳಿಯ ನೆರವಿನಲ್ಲಿ ಭಾರತದ ಅಂಡರ್ -19 ತಂಡ ಇಲ್ಲಿ ನಡೆದ ಇಂಗ್ಲೆಂಡ್ ಅಂಡರ್-19 ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ 8 ವಿಕೆಟ್‌ಗಳ ಜಯ ಗಳಿಸಿದೆ.
ಸೈಂಟ್ ಲಾರೆನ್ಸ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಗೆಲುವಿಗೆ 176 ರನ್‌ಗಳ ಸವಾಲನ್ನು ಪಡೆದ ಭಾರತದ ಅಂಡರ್ -19 ತಂಡ 33.2 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 177 ರನ್ ಗಳಿಸಿ ಗೆಲುವಿನ ದಡ ಸೇರಿತು. ಇದರೊಂದಿಗೆ ಭಾರತ ತಂಡ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿತು.
ಸೋಮವಾರ ಕಾರ್ಡಿಫ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತದ ಅಂಡರ್-19 ತಂಡ 5 ವಿಕೆಟ್‌ಗಳ ಜಯ ಗಳಿಸಿತ್ತು.
ಬುಧವಾರ ನಡೆದ ಪಂದ್ಯದಲ್ಲಿ ಭಾರತದ ಅಂಡರ್ -19 ತಂಡದ ನಾಯಕ ಪ್ರಥ್ವಿ ಶಾ 48 ರನ್(51ಎ, 7ಬೌ), ಹಿಮಾಂಶು ರಾಣಾ 74 ರನ್(85ಎ, 9ಬೌ) ಮತ್ತು ಶುಭಮ್ ಗಿಲ್ ಔಟಾಗದೆ 38 ರನ್(62ಎ, 5ಬೌ) ಗಳಿಸಿ ತಂಡದ ಗೆಲುವಿಗೆ ಅಗತ್ಯದ ರನ್ ಸೇರಿಸಿದರು.
ಆರಂಭಿಕ ದಾಂಡಿಗರಾದ ಶಾ ಮತ್ತು ರಾಣಾ ಮೊದಲ ವಿಕೆಟ್‌ಗೆ 110 ರನ್‌ಗಳ ಜೊತೆಯಾಟ ನೀಡಿದರು. ಎರಡನೆ ವಿಕೆಟ್‌ಗೆ ಹಿಮಾಂಶು ರಾಣಾ ಮತ್ತು ಶುಭಮ್ ಗಿಲ್ ಜೊತೆಯಾಟದಲ್ಲಿ 61ರನ್ ಸೇರಿಸಿದರು.
ಇದಕ್ಕೂ ಮೊದಲು ಟಾಸ್ ಜಯಿಸಿದ ಇಂಗ್ಲೆಂಡ್‌ನ ಅಂಡರ್-19 ತಂಡ ಬ್ಯಾಟಿಂಗ್ ಆಯ್ದುಕೊಂಡಿತ್ತು. ಭಾರತದ ಸ್ಪಿನ್ನರ್‌ಗಳಾದ ಅನುಕುಲ್ ಸುಧಾಕರ್ ರಾಯ್ (27ಕ್ಕೆ4), ರಾಹುಲ್ ಚಾಹರ್(26ಕ್ಕೆ3) ಮತ್ತು ಅಭಿಷೇಕ್ ಶರ್ಮ(35ಕ್ಕೆ 2) ದಾಳಿಗೆ ಸಿಲುಕಿದ ಇಂಗ್ಲೆಂಡ್‌ನ ಅಂಡರ್ 19 ತಂಡ 44.4 ಓವರ್‌ಗಳಲ್ಲಿ 175 ರನ್‌ಗಳಿಗೆ ಆಲೌಟಾಗಿದೆ.
ಇಂಗ್ಲೆಂಡ್ ತಂಡದ ಲಿಯಾಮ್ ಟ್ರಿವಾಸ್ಕಿಸ್ (35) ಮತ್ತು ಲ್ಯಾಮೊನ್‌ಬೈ (ಔಟಾಗದೆ 30) ಗರಿಷ್ಠ ಸ್ಕೋರ್ ದಾಖಲಿಸಿದರು.
ಸ್ಕೋರ್ ವಿವರ
►ಇಂಗ್ಲೆಂಡ್ ಅಂಡರ್ -19 ತಂಡ: 44.4 ಓವರ್‌ಗಳಲ್ಲಿ 175ಕ್ಕೆ ಆಲೌಟ್(ಟ್ರಿವಾಸ್ಕಿಸ್
35, ಲ್ಯಾಮೊನ್‌ಬೈ ಔಟಾಗದೆ 30;ರಾಯ್ 27ಕ್ಕೆ 4, ಚಹಾರ್ 26ಕ್ಕೆ 3)
►ಭಾರತ ಅಂಡರ್- 19ತಂಡ: 33.2 ಓವರ್‌ಗಳಲ್ಲಿ 177/2
( ಹಿಮಾಂಶು ರಾಣಾ 74, ಪ್ರಥ್ವಿ ಶಾ 48, ಶುಭಮ್ ಗಿಲ್ ಔಟಾಗದೆ 38 ;ಬೆನ್ 17ಕ್ಕೆ 1).







