ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಬೆಲ್ಟ್ ವಿತರಣೆ

ಬಣಕಲ್, ಆ.11: ಸರಕಾರಿ ಶಾಲೆಗಳಲ್ಲಿ ಖಾಸಗಿ ಶಾಲೆಗಳಂತೆ ಗುಣ ಮಟ್ಟದ ಶಿಕ್ಷಣ ನೀಡಲು ಸಮುದಾಯದತ್ತ ಶಾಲೆಯ ಸದಸ್ಯರು ಶ್ರಮಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ದೇಣಿಗೆ ನೀಡಿ ಶಾಲೆಯ ಹೆಸರನ್ನು ಹಾಕಿ ನೂತನ ಬೆಲ್ಟ್‌ಗಳನ್ನು ಶಾಲೆಗೆ ಉಚಿತವಾಗಿ ನೀಡಿದ್ದಾರೆ ಎಂದು ಶಾಲೆಯ ಮುಖ್ಯಶಿಕ್ಷಕ ಡಿ.ರಾಜು ಹೇಳಿದರು.
ಅವರು ಕೊಟ್ಟಿಗೆಹಾರದ ಅತ್ತಿಗೆರೆ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಉಚಿತ ಬೆಲ್ಟ್ ವಿತರಿಸಿ ಮಾತನಾಡಿದರು.
ಖಾಸಗಿ ಶಾಲೆಗಿಂತ ಸರಕಾರಿ ಶಾಲೆಗಳು ಯಾವುದಕ್ಕೂ ಕಡಿಮೆ ಇಲ್ಲ ಎಂಬ ಉದ್ದೇಶದಿಂದ ನೂತನ ಬೆಲ್ಟ್‌ಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ನುಡದಿರು.
ಶಾಲಾ ಸಮಿತಿಯ ನೂತನ ಅಧ್ಯಕ್ಷ ಕಾಂತರಾಜು ಹಾಗೂ ತರುವೆ ಗ್ರಾಪಂಅಧ್ಯಕ್ಷೆ ರವಿಕಲಾ ಪೈ ಅವರು ವಿಧ್ಯಾರ್ಥಿಗಳಿಗೆ ಶಾಲೆಯ ಹೆಸರಿನ ಲಾಂಛನ ಮುದ್ರೆಯ ನೂತನ ಬೆಲ್ಟ್‌ಗಳನ್ನು ದೇಣಿಗೆ ನೀಡಿದ್ದಾರೆ. ಬಡ ಮಕ್ಕಳು ಕೂಡ ಖಾಸಗಿ ಶಾಲೆಗಿಂತ ಭಿನ್ನವಾಗಿರಬಹುದು ಎಂಬ ಉದ್ದೇಶದಿಂದ ನೆರವು ನೀಡಿದ್ದಾರೆ ಎಂದರು.
ಶಾಲಾ ಸಮಿತಿಯ ನೂತನ ಅಧ್ಯಕ್ಷ ಕಾಂತರಾಜು ವಿದ್ಯಾರ್ಥಿಗಳಿಗೆ ಬೆಲ್ಟ್ ವಿತರಿಸಿದರು. ಶಾಲಾ ಶಿಕ್ಷಕ ಕುಮಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಮೈಮುನಾಭಿ, ಕವಿತ, ಜೆಸ್ಸಿಂತಾ ಉಪಸ್ಥಿತರಿದ್ದರು.







