81 ಲಕ್ಷ ಆಧಾರ್ ನಂಬರ್ ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ: ಸಚಿವ ಪಿ.ಪಿ. ಚೌಧರಿ

ಹೊಸದಿಲ್ಲಿ, ಆ.11: ಈವರೆಗೆ ವಿಶಿಷ್ಟ ಗುರುತು ಪ್ರಾಧಿಕಾರ 81 ಲಕ್ಷ ಆಧಾರ್ ನಂಬರ್ ಗಳನ್ನು ನಿಷ್ಕ್ರಿಯಗೊಳಿಸಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಖಾತೆ ಸಚಿವ ಪಿ.ಪಿ. ಚೌಧರಿ ಹೇಳಿದ್ದಾರೆ.
“ಈವರೆಗೆ ಸರಿಸುಮಾರು 81 ಲಕ್ಷ ಆಧಾರ್ ನಂಬರ್ ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಆಧಾರ್ ನಿಯಮಗಳ ಪ್ರಕಾರ ಕೆಲವು ಕಾರಣಗಳಿಂದ ಆಧಾರ್ ನಂಬರ್ ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ” ಎಂದವರು ಹೇಳಿದ್ದಾರೆ.
ವಿಶಿಷ್ಟ ಗುರುತು ಪ್ರಾಧಿಕಾರದ ಪ್ರಾದೇಶಿಕ ಕಚೇರಿಗಳಿಗೂ ಅವಕಾಶವಿದೆ ಎಂದವರು ಹೇಳಿದ್ದಾರೆ.
Next Story





