ಆರೋಪಿ ಇಸ್ಹನ್ ಸೌಲ್‌ಗೆ ಹೈಕೋರ್ಟ್‌ನಿಂದ ಷರತ್ತು ಬದ್ಧ ಜಾಮೀನು
ಉಗಾಂಡ ಯುವತಿಯ ಹತ್ಯೆ ಪ್ರಕರಣ
.jpg)
ಬೆಂಗಳೂರು, ಆ.11: ಕೊತ್ತನೂರಿನ ಬಡಾವಣೆಯಲ್ಲಿ ವೇಶ್ಯಾವಾಟಿಕೆ ದಂಧೆಯಲ್ಲಿ ಹಣದ ವಿಚಾರವಾಗಿ ಘರ್ಷಣೆ ನಡೆದು ಉಗಾಂಡ ಮೂಲದ ಯುವತಿ ನಕಯಾಕಿ ಫ್ಲೋರೆನ್ಸ್ ಕೊಲೆ ಮಾಡಿದ್ದ ಗ್ರಾಹಕ ಇಸ್ಹನ್ ಪ್ರಣವ್ ಸೌಲ್‌ಗೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಈ ಸಂಬಂಧ ಜಾಮೀನು ಕೋರಿ ಇಸ್ಹನ್ ಪ್ರಣವ್ ಸೌಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರತ್ನಕಲಾ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು. ಆರೋಪಿಯ ತಂದೆ ಹಾಗೂ ಇನ್ನೊಬ್ಬರ ಭದ್ರತಾ ಖಾತರಿ, 50 ಲಕ್ಷ ರೂ. ವೈಯಕ್ತಿಕ ಬಾಂಡ್, ಸಾಕ್ಷಿ ನಾಶ ಪಡಿಸಬಾರದು ಹಾಗೂ ತನಿಖೆಗೆ ಸಹಕರಿಸಬೇಕು ಎಂದು ಷರತ್ತುಗಳನ್ನು ವಿಧಿಸಿ ಜಾಮೀನು ನೀಡಿದೆ.
ಪ್ರಕರಣದ ಹಿನ್ನಲೆ: ಕಳೆದ ಫೆ. 2 ರ ಮಧ್ಯರಾತ್ರಿ ಎಂ.ಜಿ.ರಸ್ತೆ ಬಳಿ ಗ್ರಾಹಕರಿಗಾಗಿ ಕಾಯುತ್ತಿದ್ದಾಗ ಈಶಾನ್ಯ ಭಾರತದ ಯುವಕ ಇಸ್ಹನ್ ಪ್ರಣವ್ ಸೌಲ್ ವ್ಯವಹಾರ ಕುದುರಿತು. ಪೂರ್ತಿ ರಾತ್ರಿಗೆ 5 ಸಾವಿರ ರೂ. ಎಂದು ಮಾತುಕತೆಯಾಗಿತ್ತು. ಇಬ್ಬರ ನಡುವೆ ವ್ಯವಹಾರ ಕುದುರಿದ ನಂತರ ಇಸ್ಹನ್ ಪ್ರಣವ್ ಸೌಲ್ ಫ್ಲೋರೆನ್ಸ್ ಕೊತ್ತನೂರಿನ ತನ್ನ ಮನೆಗೆ ಕರೆದುಕೊಂಡು ಹೋಗಿದ್ದಳು. ಮೊದಲು ಇಬ್ಬರ ನಡುವೆ ಒಪ್ಪಂದವಾದಂತೆ 5 ಸಾವಿರ ರೂ. ಹಣವನ್ನು ಫ್ಲೋರೆನ್ಸ್‌ಗೆ ಇಸ್ಹನ್ ಕೊಟ್ಟಿದ್ದಾನೆ. ಆಗ 10 ಸಾವಿರ ರೂ. ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದಾಳೆ. ಈ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿದೆ. ಫ್ಲೋರೆನ್ಸ್ ಚಾಕುವಿನಿಂದ ಇಸ್ಹನ್ ಮೇಲೆ ಹಲ್ಲೆ ಮಾಡಿದ್ದು, ಆತನ ಕೈಗೆ ಗಾಯವಾಗಿದೆ. ಕೂಡಲೇ ತನ್ನ ಆತ್ಮ ರಕ್ಷಣೆಗಾಗಿ ಚಾಕುವನ್ನು ಕಸಿದುಕೊಂಡು ಆಕೆಗೆ ಇರಿದಿದ್ದಾನೆ. ಮನೆ ಮಾಲಕರು ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದೂರು ನೀಡಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ಆರೋಪಿಯನ್ನು ಆಕೆಯ ಮನೆಯಲ್ಲಿ ಬಂಧಿಸಿದ್ದರು.
ಆರೋಪಿ ಇಸ್ಹನ್ ಅಧೀನ ನ್ಯಾಯಾಲಯದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ, ಆದರೆ ಅಧೀನ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿತು. ಹೀಗಾಗಿ ಜಾಮೀನು ಕೋರಿ ಹೈಕೋರ್ಟ್‌ಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದನು.







