ಅರಣ್ಯ ಇಲಾಖೆ ಆವರಣದ ಗಂಧದ ಮರ ಕಳವಿಗೆ ದುಷ್ಕರ್ಮಿಗಳ ಯತ್ನ
ಮಂಡ್ಯ, ಆ.11: ನಗರದ ಅರಣ್ಯ ಇಲಾಖೆಯ ಕಚೇರಿ ಆವರಣದಲ್ಲಿಯೇ ಗಂಧದ ಮರಗಳನ್ನು ಕಳವಿಗೆ ವಿಫಲ ಯತ್ನ ಗುರುವಾರ ತಡರಾತ್ರಿ ನಡೆದಿದೆ.
ಕಚೇರಿಯ ಹಿಂಭಾಗದಲ್ಲಿನ ಮರವೊಂದನ್ನು ಕತ್ತರಿಸಲು ಯತ್ನಿಸಿರುವ ದುಷ್ಕರ್ಮಿಗಳು, ಮರಕ್ಕೆ ಸುತ್ತಿದ್ದ ತಂತಿಯಿಂದಾಗಿ ಕತ್ತರಿಸಲಾಗದೆ ಅದನ್ನು ಅರ್ಧಕ್ಕೆ ಬಿಟ್ಟಿದ್ದಾರೆ. ನಂತರ, ಕಚೇರಿ ಮುಂಭಾಗದಲ್ಲಿರುವ ಒಂದು ಮರವನ್ನು ಸಂಪೂರ್ಣವಾಗಿ ಕತ್ತರಿಸಿದ್ದು, ಮರ ಬಿದ್ದ ಶಬ್ಧ ಕೇಳಿ ಗಾರ್ಡ್ ಎಚ್ಚರಗೊಂಡು ಹೊರಬರುವಷ್ಟರಲ್ಲಿ ಪರಾರಿಯಾಗಿದ್ದಾರೆ. ಕಚೇರಿ ಆವರಣದಲ್ಲಿ ಸಿಸಿ ಕ್ಯೆಮೆರಾ ಅಳವಡಿಸಿರುವುದರಿಂದ ದಷ್ಕರ್ಮಿಗಳು ಸಾಧ್ಯತೆಯಿದ್ದು, ಈ ಸಂಬಂಧ ಅರಣ್ಯ ಇಲಾಖೆ ಕಾಯ್ದೆ ಅಡಿ ಇಲಾಖೆಯ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಹಿಂದೆ ಜಿಲ್ಲಾಧಿಕಾರಿ ನಿವಾಸದ ಆವರಣದಲ್ಲೂ ಗಂಧದ ಮರವೊಂದನ್ನು ಕಳ್ಳರು ಕಡಿದುಕೊಂಡು ಹೋಗಿದ್ದನ್ನು ಇಲ್ಲಿ ಸ್ಮರಿಸಬಹುದು.
Next Story





