ಮೀನುಗಾರಿಕಾ ದೋಣಿಗಳ ತಪಾಸಣೆ
ಉಡುಪಿ, ಆ.11: ಉಡುಪಿ ತಾಲೂಕಿನಲ್ಲಿ 2017-18ನೇ ಸಾಲಿನ ಮೀನುಗಾರಿಕಾ ಸೀಮೆಎಣ್ಣೆ ಹೊಸತು ಮತ್ತು ನವೀಕರಣಕ್ಕಾಗಿ ಆಹಾರ, ಕಂದಾಯ ಮತ್ತುಮೀನುಗಾರಿಕೆ ಇಲಾಖೆಗಳ ಮೂಲಕ ಜಂಟಿ ತಪಾಸಣೆಯನ್ನು ಉಡುಪಿಯ ಮಲ್ಪೆ, ಪಡುಬಿದ್ರೆ, ಹಂಗಾರಕಟ್ಟೆ, ಹೆಜಮಾಡಿ ಕೇಂದ್ರಗಳಲ್ಲಿ ಆ.17 ಮತ್ತು 19ರಂದು ಹಮ್ಮಿಕೊಳ್ಳಲಾಗಿದೆ.
2017-18ನೇ ಸಾಲಿನಲ್ಲಿ ಹೊಸ ರಹದಾರಿ ಮತ್ತು ನವೀಕರಣ ರಹದಾರಿ ಗಳಿಗೆ ಆ.16ರೊಳಗೆ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸುವಂತೆ ಮತ್ತು ಜಂಟಿ ತಪಾಸಣೆಗೆ ಬರುವಾಗ ಹೊಸ ರಹದಾರಿ ಕೋರಿರುವ ಅರ್ಜಿದಾರರು ಮೀನುಗಾರಿಕಾ ದೋಣಿ ಮತ್ತು ಇಂಜಿನ್ ಸಹಿತ ಮೀನುಗಾರಿಕಾ ಇಲಾಖಾ ನೊಂದಣಿ ಪತ್ರ, ಇಂಜಿನ್ ಬಿಲ್ಲು ಮತ್ತು ದೋಣಿಬಿಲ್ಲುಗಳ ಮೂಲ ಪ್ರತಿಗಳನ್ನು ಪರಿಶೀಲನೆಗೆ ಹಾಜರುಪಡಿಸಬೇಕು.
ನವೀಕರಣ ಕೋರಿರುವ ರಹದಾರಿದಾರರು ಮೀನುಗಾರಿಕಾ ಇಲಾಖಾ ನೊಂದಣಿ ಪತ್ರದ ಪ್ರತಿ ಮತ್ತು ಸೀಮೆಎಣ್ಣೆ ರಹದಾರಿ ಪ್ರತಿಯನ್ನು ಪರಿಶೀಲನೆಗೆ ಹಾಜರುಪಡಿಸಬೇಕು. ಇದಕ್ಕೆ ಎಲ್ಲಾ ಮೀನುಗಾರರು ಸಹಕರಿಸುವಂತೆ ಉಡುಪಿ ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





