ಐಟಿಐ ಪ್ರವೇಶಕ್ಕೆ ಅಂತಿಮ ದಿನ ವಿಸ್ತರಣೆ
ಉಡುಪಿ, ಆ.11: 2017-18ನೆ ಸಾಲಿನಲ್ಲಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಹೊಸದಾಗಿ ಆರಂಗೊಂಡಿರುವ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2017-18ನೆ ಸಾಲಿನಲ್ಲಿ ಎಸ್.ಸಿ.ವಿ.ಟಿ ಅಡಿಯಲ್ಲಿ ಫಿಟ್ಟರ್, ಇಲೆಕ್ಟ್ರಿಷಿಯನ್, ಇಎಂ, ಎಂಆರ್‌ಎಸಿ, ಎಂಎಂವಿ ವೃತ್ತಿಯಲ್ಲಿ ಲಭ್ಯವಿರುವ ಸ್ಥಾನಗಳ ಪ್ರವೇಶಕ್ಕಾಗಿ ಎಸೆಸೆಲ್ಸಿ ಪಾಸಾಗಿರುವ ಅರ್ಹ ಅ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನವನ್ನು ಆ.12ರವರೆಗೆ ಮುಂದುವರಿಸಲಾಗಿದೆ.
ಆಸಕ್ತ ಅ್ಯರ್ಥಿಗಳು ಆ.12ರವರೆಗೆ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪೆರ್ಡೂರು ಇಲ್ಲಿ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
Next Story





